ನಾಯಕನಹಟ್ಟಿಯ ಕಾವಲುಬಸವೇಶ್ವರ ನಗರ ಸಮೀಪದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಕಾಯ್ದಿರಿಸಿರುವ ಜಾಗ
ಜಿಲ್ಲೆಯಲ್ಲಿ ಜಲ ವಾಹನದ ಕೊರತೆ ನಡುವೆಯೂ ಅವಘಡ ತಪ್ಪಿಸಲು ನಮ್ಮ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಗತ್ಯ ವಾಹನದ ಸೌಲಭ್ಯ ಕಲ್ಪಿಸಬೇಕಿದೆ. ಹಿರಿಯೂರಿಗೆ ಸದ್ಯ ದಾವಣಗೆರೆಯಿಂದ ಎರವಲು ಸೇವೆ ಕೇಳಿದ್ದೇವೆ
ಸೋಮಶೇಖರ್ ವಿ.ಅಗಡಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಜಿಲ್ಲೆಯ ಗಡಿಭಾಗದಲ್ಲಿರುವ ಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ತೆರೆಯಬೇಕೆಂಬ ಉದ್ದೇಶದಿಂದ ಸ್ಥಳ ಪರಿಶೀಲಿಸಿ ಅಂತಿಮಗೊಳಿಸಲಾಗಿದೆ. ಸರ್ಕಾರದಿಂದ ಅನುದಾನ ಮಂಜೂರಾದ ಕೂಡಲೇ ಠಾಣೆ ನಿರ್ಮಾಣವಾಗಲಿದೆ
ಪಿ.ಎಸ್. ಜಯರಾಮಯ್ಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಮೈಸೂರು ವಿಭಾಗ
ಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸುವ ಮೂಲಕ ಆಗುತ್ತಿರುವ ನಷ್ಟ ತಪ್ಪಿಸಬೇಕು. ಹಿರಿಯೂರಿನಿಂದ ವಾಹನ ಬರಲು ವಿಳಂಬವಾಗಿ ಬೆಂಕಿ ಅವಘಡಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ
ಜ.ರಾಮಚಂದ್ರ ಅರಳೀಕೆರೆ
ಶ್ರೀರಾಂಪುರ ಹೋಬಳಿಗೂ ಒಂದು ಅಗ್ನಿಶಾಮಕ ವಾಹನ ತುರ್ತಾಗಿ ಬೇಕಿದೆ. ಬೇಸಿಗೆಯಲ್ಲಿ ಹೆಚ್ಚುವರಿ ವಾಹನಗಳ ಅವಶ್ಯಕತೆಯಿದೆ. ಅವಘಡ ನಡೆದಿರುವ ಸ್ಥಳಕ್ಕೆ ವಾಹನ ಬರುವಷ್ಟರಲ್ಲಿ ಅಪಾರ ನಷ್ಟವಾಗಿರುತ್ತದೆ