ಚಿತ್ರದುರ್ಗದ ಮೇದೆಹಳ್ಳಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ಮರೆಯಾಗಿರುವುದರಿಂದ ಜನರು ರಸ್ತೆಯಲ್ಲೇ ಓಡಾಡುತ್ತಿರುವುದು
ಹೊಸದುರ್ಗದಲ್ಲಿ ಪಾದಚಾರಿ ಮಾರ್ಗದ ಮೇಲೆ ಅಂಗಡಿ ಸಾಮಗ್ರಿಗಳನ್ನು ಇಟ್ಟಿರುವುದು
ಹೊಳಲ್ಕೆರೆಯ ಶಿವಮೊಗ್ಗ ರಸ್ತೆಯ ಪಾದಚಾರಿ ಮಾರ್ಗದಲ್ಲಿ ತಲೆ ಎತ್ತಿರುವ ಗೂಡಂಗಡಿಗಳು

ಅಂಗಡಿಯವರು ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಶೀಘ್ರ ಮಾಲೀಕರಿಗೆ ಸೂಚನೆ ನೀಡಿ ಅವುಗಳನ್ನು ತೆರವುಗೊಳಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡುತ್ತೇವೆ
ಎಸ್.ಲಕ್ಷ್ಮಿ ಪೌರಾಯುಕ್ತೆ ಚಿತ್ರದುರ್ಗ
ವಾಣಿಜ್ಯ ಅಂಗಡಿಗಳು ಫುಟ್‌ಪಾತ್ ಅತಿಕ್ರಮಿಸಿಕೊಂಡಿರುವುದರಿಂದ ಚಿತ್ರದುರ್ಗದಲ್ಲಿ ಪಾದಚಾರಿ ಮಾರ್ಗವನ್ನು ಹುಡುಕುವಂತಾಗಿದೆ. ಹೀಗಾಗಿ ನಾಗರಿಕರು ಜೀವ ಭಯದಲ್ಲೇ ರಸ್ತೆಗಳಲ್ಲಿ ನಡೆದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ಎಂ.ದಯಾನಂದ ನಾಗರಿಕ
ಪೊಲೀಸ್ ಇಲಾಖೆ ಸಹಕಾರದಿಂದ ಹೊಸದುರ್ಗದಲ್ಲಿ ಮೊದಲು ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತದೆ. ಮುಂದಿನ 20 ದಿನಗಳೊಳಗೆ ಅಂಗಡಿಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುತ್ತದೆ
ಎನ್.ನಾಗಭೂಷಣ್ ಮುಖ್ಯಾಧಿಕಾರಿ ಪುರಸಭೆ