ಮೊಳಕಾಲ್ಮುರು: ಸ್ಥಳೀಯ ಮಹಾ ಗಣಪತಿ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ್ದ 58 ವರ್ಷದ ಮೂರ್ತಿ ವಿಸರ್ಜನೆ ಶೋಭಾಯಾತ್ರೆಯಲ್ಲಿ ಧ್ವನಿವರ್ಧಕ ಹಾಕಲು ಅವಕಾಶ ನೀಡಲಿಲ್ಲ ಎಂಬ ಅಂಶವು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಯಿತು.

ಚಳ್ಳಕೆರೆಯಲ್ಲಿ ಶನಿವಾರ ನಡೆದ ಶೋಭಾಯಾತ್ರೆಯಲ್ಲಿ ಡಿಜೆಗೆ ಅವಕಾಶ ನೀಡಲಿಲ್ಲ, ಮೊಳಕಾಲ್ಮುರಿನ ಶೋಭಾಯಾತ್ರೆಯಲ್ಲಿ ಮಾಜಿ ಶ್ರೀರಾಮುಲು ಭಾಗವಹಿಸುವ ಕಾರಣ ಅವಕಾಶ
ಸಿಗಬಹುದು ಎಂಬ ನಿರೀಕ್ಷೆ ಹೊಂದಲಾಗಿತ್ತು. ಆದರೆ ನೇತೃತ್ವ ವಹಿಸಿದ್ದ ಡಿವೈಎಸ್ಪಿ ಅವರಲ್ಲಿ ಶ್ರೀರಾಮುಲು ಸಣ್ಣ ಪ್ರಮಾಣದ ಡಿಜೆಗೆ ಅವಕಾಶ ಕೊಡಿ ಎಂದು ಮಾಡಿದ ಮನವಿಗೆ ಆಸ್ಪದ ನೀಡದ ಪರಿಣಾಮ ಅಭಿಮಾನಿಗಳ ಜತೆ ಮುಖ್ಯರಸ್ತೆಯಲ್ಲಿ 2 ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು.

ಬೇರೆ ಕಡೆಗಳಲ್ಲಿ ಡಿಜೆಗೆ ಅವಕಾಶ ನೀಡಲಾಗಿದೆ, ಹೊಳಲ್ಕೆರೆಯಲ್ಲಿ ಶಾಸಕ ಎಂ. ಚಂದ್ರಪ್ಪ ಅನುಮತಿ ಕೊಡಿಸಿದ್ದಾರೆ. ಇಲ್ಲಿನ ಶಾಸಕರು ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರಾಜ್ಯಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಹಿಂದೂ ಹಬ್ಬಗಳಲ್ಲಿ ತೊಂದರೆ ನೀಡುತ್ತಾ ಹಿಂದೂ ಧರ್ಮ ಹತ್ತಿಕ್ಕುವವಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು, ಮುಖಂಡರು ಘೋಷಣೆ ಕೂಗಿದರು.

ಕೆಲ ಮುಖಂಡರು ಮಾತನಾಡಿ, ಶಾಂತಿಯುತವಾಗಿ ನಡೆಯುತ್ತಿದ್ದ ಶೋಭಾಯಾತ್ರೆ ಗೊಂದಲಕ್ಕೆ ಕಾಂಗ್ರೆಸ್ ಮತ್ತು ಪೊಲೀಸರು ಕಾರಣವಾಗಿದ್ದಾರೆ. ನಮ್ಮ ಸಂಯಮ ಮೀರುತ್ತಿದ್ದು ಮುಂದೆ ಆಗುವ ಅನಾಹುತಕ್ಕೆ ಪೊಲೀಸರು ನೇರ ಹೊಣೆ ಎಂದು ಘೋಷಣೆ ಕೂಗಿದರು. ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಗಮನಿಸಿದ ಪೊಲೀಸರು 2 ಸೌಂಡ್ ಬಾಕ್ಸ್ಗಳನ್ನು ತರಿಸಿ ಮೆರವಣಿಗೆ ನಡೆಸುವಂತೆ ಹೇಳಿದರು. ಆರಂಭದಲ್ಲಿ ನಿರಾಕರಿಸಿದ ಪ್ರತಿಭಟನಾಕಾರರು ನಂತರ ಒಪ್ಪಿ ಮೆರವಣಿಗೆ ಪ್ರಾರಂಭಿಸಿದರು.

ಮಾಜಿ ಸಚಿವ ಬಿ. ಶ್ರೀರಾಮುಲು ಸ್ವತ: ಟ್ರಾಕ್ಟರ್ ಚಲಾಯಿಸಿ ಮೆರವಣಿಗೆಯಲ್ಲಿ ಭಾಗವಹಿಸಿ ವಾಪಾಸ್ ಹೋದರು. ನಂತರ ಧ್ವನಿವರ್ಧಕ ಪದೇ, ಪದೇ ಕೈಕೊಡುತ್ತಿದ್ದ ಪರಿಣಾಮ ಸಿಟ್ಟಾದ ಜನರು ನಮಗೆ ಇದರ ಸಹವಾಸ ಬೇಡ ಡೊಳ್ಳು ತರಿಸಿಕೊಂಡು ಶೋಭಾಯಾತ್ರೆ ಮುಂದುವರಿಸುತ್ತೇವೆ ಎಂದು ಧ್ವನಿವರ್ಧಕವನ್ನು ವಾಪಾಸ್ ಕಳಿಸಿದರು. ಸಂಜೆ 5 ಗಂಟೆಗೆ ಆರಂಭವಾದ ಶೋಭಾಯಾತ್ರೆ ಮುಖ್ಯರಸ್ತೆಯಲ್ಲಿ ಸಂಚರಿಸಿ ಕೋಟೆ ಬಡಾವಣೆಯಲ್ಲಿರುವ ಕಲ್ಯಾಣಿಯಲ್ಲಿ ಮೂರ್ತಿ ವಿಸರ್ಜನೆ ಮಾಡುವ ಮೂಲಕ ಕೊನೆಗೊಂಡಿತು.

ಶೋಭಾಯಾತ್ರೆಗೆ ಮೂರ್ತಿ ಪ್ರತಿಷ್ಠಾಪಿಸಿದ್ದ ಬಿಇಒ ಕಚೇರಿ ಮುಂಭಾಗದಲ್ಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ಚಾಲನೆ ನೀಡಿದರು.
ಬಿಜೆಪಿ ಮುಖಂಡರಾದ ಬಾಳೆಕಾಯಿ ರಾಮದಾಸ್, ರವಿಕುಮಾರ್, ಕೆ.ಟಿ. ಶ್ರೀರಾಮರೆಡ್ಡಿ, ಪಾಪೇಶ್ ನಾಯಕ, ಚನ್ನಗಾನಹಳ್ಳಿ ಮಲ್ಲೇಶ್ ಧರಣಿಯಲ್ಲಿ ಭಾಗವಹಿಸಿದ್ದರು.

ರಾಜ್ಯ ದ್ರಾಕ್ಷಾರಸ ಹಾಗೂ ವೈನ್ ಬೋರ್ಡ್ ಅಧ್ಯಕ್ಷ ಬಿ. ಯೋಗೇಶ್ಬಾಬು, ಗಣಪತಿ ಸಮಿತಿಯ ಶಾಂತಾರಾಂ ಬಸಾಪತಿ, ಚಂದ್ರಶೇಖರ ಗೌಡ, ಡಾ. ಪಿ.ಎಂ. ಮಂಜುನಾಥ್, ಟಿ. ಚಂದ್ರಣ್ಣ, ಬಿ.ಟಿ. ನಾಗಭೂಷಣ, ಯರ್ಜೇನಹಳ್ಳಿ ನಾಗರಾಜ್, ಟಿ.ಟಿ. ರವಿಕುಮಾರ್, ವಿನಯ್ ಕುಮಾರ್, ಬಿ. ವಿಜಯ್, ಮರ್ಲಹಳ್ಳಿ ರವಿಕುಮಾರ್ ಯಾತ್ರೆಯಲ್ಲಿ ಇದ್ದರು.

ಫ್ಲೆಕ್ಸ್ ಭರಾಟೆ...

ಶೋಭಾಯಾತ್ರೆ ಅಂಗವಾಗಿ ಮುಖ್ಯರಸ್ತೆ ಎರಡೂ ಬದಿಯಲ್ಲಿ ಬಿಜೆಪಿ ಬೆಂಬಲಿಗರ ಫೆಕ್ಸ್ ಹಾವಳಿ ಎದ್ದು ಕಾಣುತ್ತಿತ್ತು, ಪಾಪೇಶ್ ನಾಯಕ ಮತ್ತು ತಿಮ್ಮಪ್ಪ ಎಂಬುವವರು ಪಟ್ಟಣ ಪಂಚಾಯಿತಿಯಿಂದ 65 ಫ್ಲೆಕ್ಸ್ ಗಳಿಗೆ ಅನುಮತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಮುಖಂಡರಿಗೆ ಸೇರಿದ ಫ್ಲೆಕ್ಸ್ಗಳ ಕೊರತೆ ಪಕ್ಷದ ಮುಖಂಡರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತ್ತು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.