ಬುಧವಾರ, ಮಾರ್ಚ್ 29, 2023
32 °C

‘ಮೌಢ್ಯ ಆಚರಣೆಗಳಿಂದ ಹೊರಬನ್ನಿ’: ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು:  ಧಾರ್ಮಿಕ ವಿಚಾರದಲ್ಲಿ ಬುಡಕಟ್ಟು ಸಮುದಾಯದವರು ಆಚರಿಸುವ ಮೌಢ್ಯ ಆಚರಣೆಗಳು, ಸಮಾಜದಲ್ಲಿ ಭಿನ್ನತೆಯನ್ನು ಗುರುತಿಸುವಂತಾಗಿದೆ. ಈಗಿನ ವಿದ್ಯಾವಂತ ಹಾಗೂ ಪ್ರಜ್ಞಾವಂತರು ಈ ಬುಡಕಟ್ಟು ಸಮುದಾಯಗಳನ್ನು ಸುಧಾರಿಸುವ ಮತ್ತು ಮೌಢ್ಯದಿಂದ ಹೊರಬರುವಂತೆ ಸಂಘಟಿಸುವ ಕಾಲ ಸನ್ನಿಹಿತವಾಗಿದೆ ಎಂದು ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ ಹೇಳಿದರು.

ಸಮೀಪದ ತಣಿಗೆಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕರಿಯಮ್ಮ ದೇವಿ ರಥದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬುಡಕಟ್ಟು ಸಮುದಾಯದವರು, ಹಬ್ಬ, ಜಾತ್ರೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ನೀಡುವುದು ಇಂದಿಗೂ ಆಚರಿಸುತ್ತಿರುವುದು ವಿಷಾದನೀಯ. ಯಾವುದೇ ದೇವರು ಬಲಿಯನ್ನು ನೀಡಬೇಕು ಎಂದು ಹೇಳಿಲ್ಲ. ದೇವರನ್ನು ಒಲಿಸಿಕೊಳ್ಳಲು ಶುದ್ಧವಾದ ಮನಸು ಮತ್ತು ಏಕಾಗ್ರತೆ ಬೇಕೇ ವಿನಾ ಮೌಢ್ಯಾಚರಣೆಗಳಲ್ಲ ಎಂದು ತಿಳಿಸಿದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ‘ಹುಟ್ಟು ಸಾವಿನ ನಡುವಿನ ಜೀವನ ಸಾರ್ಥಕವಾಗಬೇಕೆಂದರೆ, ಭಗವಂತನ ನಾಮಸ್ಮರಣೆಯನ್ನು ಮಾಡುವುದು ಲೇಸು’ ಎಂದರು.

ಶಾಸಕ ಎಂ. ಚಂದ್ರಪ್ಪ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವುದಾಗಿ ತಿಳಿಸಿದರು.

ಬಿ. ದುರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಟಿ. ರಮೇಶ್‌ ಅಧ್ಯಕ್ಷತೆ ವಹಿಸಿದ್ದರು. ಮುರಳಿಧರ ಸ್ವಾಮೀಜಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಟಿ. ಹನುಮಂತಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಎಂ.ಬಿ. ಸಿದ್ಧೇಶ್‌, ಲೋಹಿತ್‌ಕುಮಾರ್‌, ಇಂದ್ರಪ್ಪ ಗೌಡ್ರು, ಮಂಜಿಬಾಯಿ ಸುರೇಶ್‌, ಸುಧಮ್ಮ ಚಂದ್ರಶೇಖರಪ್ಪ, ಟಿ.ಆರ್‌. ಗೋವಿಂದನಾಯ್ಕ್‌, ಲಿಂಗರಾಜ್‌, ರುದ್ರೇಗೌಡ, ಹನುಮಂತಪ್ಪ ಗೋಡೆಮನೆ, ನಾರಾಯಣನಾಯ್ಕ್‌, ದೇವರಾಜ್‌, ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.