ಬುಧವಾರ, ಜನವರಿ 19, 2022
24 °C

ಮೊಳಕಾಲ್ಮುರು: ವೈಭವದ ಶ್ರೀನಿವಾಸ ಕಲ್ಯಾಣೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಇಲ್ಲಿನ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಿರುವ ಪದ್ಮಾವತಿ ಕಲ್ಯಾಣ ಮಂಟಪ ಲೋಕಾರ್ಪಣೆ ಮಾಡಲಾಯಿತು.

ರಾಘವೇಂದ್ರ ಸ್ವಾಮಿ ಮಠದಿಂದ ₹ 50 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಲೋಕಾರ್ಪಣೆ ಅಂಗವಾಗಿ ಶನಿವಾರ ಪುಣ್ಯಾಹ, ಮಹಾ ಗಣಪತಿ ಪೂಜೆ, ಸ್ವಸ್ತಿವಾಚನ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ಕಾರ್ಯಗಳು ಜರುಗಿದವು.

ಭಾನುವಾರ ಬೆಳಿಗ್ಗೆ ಗೋಪೂಜೆ, ಶ್ರೀನಿವಾಸ ಸ್ವಾಮಿಯ ಪ್ರವೇಶ, ಸ್ವಾಮಿಗೆ ಆರತಿ, ಶ್ರೀನಿವಾಸ ಸ್ವಾಮಿಗೆ ವರಪೂಜೆ, ದೇವರಿಗೆ ಮಂಗಳ ಸ್ನಾನ, ಪುಣ್ಯಾಹ, ನಾಂದಿ, ಲಕ್ಷ್ಮೀ ಪೂಜೆ, ಮಧುಪರ್ಕ ಪೂಜೆ, ಕಾಶಿಯಾತ್ರೆ ನಡೆಸಲಾಯಿತು.

ಮಧ್ಯಾಹ್ನ ನಿರೀಕ್ಷಣೆ, ಕನ್ಯಾದಾನ, ಕಂಕಣ ಬಂಧನ, ಮಾಂಗಲ್ಯಧಾರಣೆ, ಮಹಾಮಂಗಳಾರತಿ, ಹಸ್ತೋದಕ, ತೀರ್ಥಪ್ರಸಾದ, ನೈವೇದ್ಯ, ಮಂತ್ರಾಕ್ಷತೆ ನೀಡಲಾಯಿತು. ಬೆಂಗಳೂರಿನ ಕಲ್ಯಾಣಂ ರಾಘವೇಂದ್ರರಾವ್ ನೇತೃತ್ವ ವಹಿಸಿದ್ದರು.

ದೇವಸ್ಥಾನ ಸಮಿತಿಯ ಎಂ.ಎಸ್. ಅನಂತ ಪಭ್ಮನಾಭ, ಎಂ.ಎಸ್. ಗುರುರಾಜ್, ಎಂ.ಎಸ್. ವೇಣುಗೋಪಾಲ್, ಎಂ.ಎಸ್. ಶ್ರೀಧರ್, ಎಂಎಸ್. ಗೋಪಿನಾಥ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು