ಶನಿವಾರ, ಜೂನ್ 19, 2021
22 °C
ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿ

ಬಿರುಗಾಳಿಗೆ ಧರೆಗುರುಳಿದ ಬಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮ್ಯಾಕ್ಲೂರಹಳ್ಳಿ (ಹಿರಿಯೂರು): ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯಲ್ಲಿ ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ನಾಗರತ್ನಮ್ಮ ಎಂಬುವವರ ತೋಟದಲ್ಲಿ ಫಸಲಿಗೆ ಬಂದಿದ್ದ 500 ಬಾಳೆ ಗಿಡಗಳು ನೆಲಕ್ಕುರುಳಿವೆ.

‘ಯುಗಾದಿ ಹಬ್ಬದ ಸಮಯದಲ್ಲಿ ಒಂದಿಷ್ಟು ಬಾಳೆ ಕಟಾವು ಮಾಡಲಾಗಿತ್ತು. ನಿರೀಕ್ಷಿಸಿದಷ್ಟು ಬೆಲೆ ಸಿಗಲಿಲ್ಲ. ಬಸವ ಜಯಂತಿಗೆ ಉಳಿದ ಬಾಳೆಯನ್ನು ಕಟಾವು ಮಾಡುವ ಆಲೋಚನೆ ಇತ್ತು. ಶುಕ್ರವಾರ ಸಂಜೆ ಮಳೆಗಿಂತ ಬಿರುಗಾಳಿಯೇ ಜೋರಾಗಿ ಬೀಸಿದ್ದರಿಂದ ಬಹುತೇಕ ಬೆಳೆ ನೆಲಕಚ್ಚಿದೆ. ಬೇಸಾಯಕ್ಕೆ ಖರ್ಚು ಮಾಡಿದ ಹಣವೂ ಈಗ ಸಿಗದು’ ಎಂದು ನಾಗರತ್ನಮ್ಮ ಅಳಲು ತೋಡಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು