ಹಿರಿಯೂರಿನಲ್ಲಿ ಭೂಮಿ ನೆನೆಯುವಷ್ಟು ಮಳೆಯಾಗದ ಕಾರಣ ತಾಲ್ಲೂಕು ಕ್ರೀಡಾಂಗಣದಲ್ಲಿನ ಪಥಸಂಚಲನದ ಅಂಕಣದಲ್ಲಿ ಮಣ್ಣು–ಒಣಗಿದ ಹುಲ್ಲು ಕಾಣುತ್ತಿರುವುದು.
ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕು ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕ್ರೀಡೆಗಳಿಗೆ ಅಗತ್ಯವಿರುವ ಅಂಕಣಗಳನ್ನು ನಿರ್ಮಿಸಲು ಅಂದಾಜು ಪಟ್ಟಿ ಸಿದ್ಧಪಡಿಸಲು ಸೂಚಿಸಿದ್ದಾರೆ. ಯುವ ಸಬಲೀಕರಣ ಇಲಾಖೆಯಿಂದ ಅನುದಾನ ಬರಲಿದ್ದು ಶೀಘ್ರವೇ ಅಂಕಣ ನಿರ್ಮಿಸುತ್ತೇವೆ. ಚಾವಣಿ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿಯಿಂದ ನಿರ್ವಹಿಸಲಾಗಿದೆ. ಸೋರುತ್ತಿದ್ದರೆ ಅದನ್ನು ಅವರೇ ಸರಿಪಡಿಸಬೇಕಾಗುತ್ತದೆ.