ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡು, ಬಯಲುಸೀಮೆ ಸೊಬಗಿನ ಸಮಾಗಮ

ಪ್ರಥಮ ಅಂತರ್‌ ಜಿಲ್ಲಾ ಸಮ್ಮೇಳನ ಇಂದಿನಿಂದ
Published 1 ಫೆಬ್ರುವರಿ 2024, 14:19 IST
Last Updated 1 ಫೆಬ್ರುವರಿ 2024, 14:19 IST
ಅಕ್ಷರ ಗಾತ್ರ

ಹೊಸದುರ್ಗ: ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಅಂತರ್‌ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಇಂದಿನಿಂದ ಆರಂಭವಾಗಲಿದೆ.

ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಸಾಹಿತ್ಯ ಸಮಾಗಮವನ್ನು ಕಣ್ತುಂಬಿಕೊಳ್ಳಲು ಸಾಹಿತ್ಯಾಭಿಮಾನಿಗಳು ಉತ್ಸುಕರಾಗಿದ್ದಾರೆ.

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷರಾಗಿದ್ದು, ಸಾಹಿತ್ಯ ಸಮ್ಮೇಳನದ ಅಂಗವಾಗಿ ಕುವೆಂಪು ಮಹಾದ್ವಾರ’, ‘ತರಾಸು ಮಹಾಮಂಟಪ’ ಹಾಗೂ ಅಲ್ಲಮಪ್ರಭು ಹೆಸರಿನ ಮೂರು ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ.

ಫೆ.2ರಂದು ಬೆಳ್ಳಿಗ್ಗೆ 8 ಗಂಟೆಗೆ ತಹಶೀಲ್ದಾರ್‌ ತಿರುಪತಿ ಪಾಟೀಲ ರಾಷ್ಟ್ರ ಧ್ವಜಾರೋಹಣ, ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ. ಚಂದ್ರಪ್ಪ ನಾಡ ಧ್ವಜಾರೋಹಣ, ಕೋಶಾಧ್ಯಕ್ಷ ಆರ್.‌ಮಲ್ಲಿಕಾರ್ಜುನಯ್ಯ ಪರಿಷತ್‌ ಧ್ವಜಾರೋಹಣ ನೇರವೇರಿಸುವರು. ಬೆಳಿಗ್ಗೆ 9 ಗಂಟೆಗೆ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಪಂಡಿತಾರಾಧ್ಯ ಶ್ರೀಗಳು ರಚಿಸಿರುವ 126 ಗ್ರಂಥಗಳ ಮೆರವಣೆಗೆ ಶ್ರೀಮಠದಿಂದ ಆರಂಭವಾಗಿ ಸಾಣೇಹಳ್ಳಿಯ ಪ್ರತಿ ಬೀದಿಯಲ್ಲೂ ಸಾಗಲಿದೆ. ಇದನ್ನು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಉದ್ಘಾಟಿಸುವರು. ಉಭಯ ಜಿಲ್ಲೆಗಳ 15 ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಸಮ್ಮೇಳನವನ್ನು ಸಾಹಿತಿ ಗೊ.ರು. ಚನ್ನಬಸಪ್ಪ ಬೆಳಿಗ್ಗೆ 10.30ಕ್ಕೆ ಉದ್ಘಾಟಿಸುವರು. ಕಸಾಪ ಅಧ್ಯಕ್ಷ ಮಹೇಶ್‌ ಜೋಷಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು, ‘ಬೆಳಕಿನೆಡೆಗೆ’ ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್‌, ಭಾಷಣದ ಪ್ರತಿಯನ್ನು ಶಾಸಕ ಬಿ.ಜಿ. ಗೋವಿಂದಪ್ಪ ಲೋಕಾರ್ಪಣೆಗೊಳಿಸುವರು. ಕಸಾಪ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಚಿಕ್ಕಮಗಳೂರಿನ ಸೂರಿ ಶ್ರೀನಿವಾಸ್‌ ಉಪಸ್ಥಿತರಿರುವರು.

ಫೆ. 3ರಂದು ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿ ನಡೆಯಲಿದೆ. ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ, ಬಹಿರಂಗ ಅಧಿವೇಶನ ನಡೆಯಲಿದೆ. ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಭಿಮಾನಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಪುಸ್ತಕ ಮಳಿಗೆಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ.ಸಾಣೇಹಳ್ಳಿಯು ಕನ್ನಡ ಧ್ವಜಗಳಿಂದ ರಾರಾಜಿಸುತ್ತಿದ್ದು, ಸಾಹಿತ್ಯಾಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದೆ.

ಹೊಸದುರ್ಗದ ಸಾಣೇಹಳ್ಳಿಯಲ್ಲಿ ಸಿದ್ಧವಾಗಿರುವ ತರಾಸು ವೇದಿಕೆ
ಹೊಸದುರ್ಗದ ಸಾಣೇಹಳ್ಳಿಯಲ್ಲಿ ಸಿದ್ಧವಾಗಿರುವ ತರಾಸು ವೇದಿಕೆ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸಾಹಿತ್ಯ ರಂಗಭೂಮಿ ಸಾಧಕ ಸಾಣೇಹಳ್ಳಿ ಶ್ರೀ

ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ಕಲೆ ಸಾಹಿತ್ಯ ಸಂಸ್ಕೃತಿ ರಂಗಭೂಮಿಗೆ ಸಮಯ ಮೀಸಲಿರಿಸಿದ್ದಾರೆ. ಬಸವಾದಿ ಶರಣರ ಜೀವನಾದರ್ಶ ಬದುಕು ಕುರಿತಾದ ಕೃತಿಗಳನ್ನು ಹೊರ ತಂದಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತದಲ್ಲಿ ವಚನ ಸಾಹಿತ್ಯ ಶರಣರ ಪರಿಚಯವನ್ನು ನಾಟಕಗಳ ಮೂಲಕ ಜನರಿಗೆ ಪರಿಚಯಿಸುವ ಮೂಲಕ ವಿನೂತನ ಸಾಧನೆ ಮಾಡಿದ್ದಾರೆ. 2023ರಲ್ಲಿ ವಚನ ನೃತ್ಯ ಸಂಯೋಜಿಸಿ ಪ್ರಧಾನಿ ಅವರ ಮೆಚ್ಚುಗೆ ಗಳಿಸಿರುವ ಇವರ ಸಾಹಿತ್ಯ ಕೊಡುಗೆ ಅಪಾರ.

ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು..

. ಗೋಷ್ಠಿ 1: ಚಿತ್ರದುರ್ಗ- ಚಿಕ್ಕಮಗಳೂರು ಜಿಲ್ಲೆಗಳ ಇತಿಹಾಸ ಹಾಗೂ ಸಾಹಿತ್ಯ ಅಧ್ಯಕ್ಷತೆ: ಇತಿಹಾಸ ಸಂಶೋಧಕ (ಧಾರವಾಡ) ಲಕ್ಷ್ಮಣ ತೆಲಗಾವಿ ಉದ್ಘಾಟನೆ: ಚಿಕ್ಕಮಗಳೂರಿನ ಕುವೆಂಪು ವಿದ್ಯಾನಿಕೇತನ ಸಂಸ್ಥಾಪಕ ಕಾರ್ಯದರ್ಶಿ ಕೆ.ಸಿ. ಶಂಕರ್‌ ವಿಷಯ ಮಂಡನೆ: ನಿವೃತ್ತ ಉಪನ್ಯಾಸಕ ಬಿ.ರಾಜಶೇಖರಪ್ಪ ಲೇಖಕ ಸುಧೀರ್‌ ಕುಮಾರ್‌ ಮೂರೊಳ್ಳಿ ಸಮಯ: ಮಧ್ಯಾಹ್ನ 1 ಕ್ಕೆ

ಗೋಷ್ಠಿ 2: ಮಠಗಳ ಧಾರ್ಮಿಕ ಸಾಹಿತ್ಯಕ ಸಾಂಸ್ಕೃತಿಕ ಕೊಡುಗೆ ಅಧ್ಯಕ್ಷತೆ: ಮಾದಾರ ಚೆನ್ನಯ್ಯ ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಉದ್ಘಾಟನೆ: ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ವಿಷಯ ಮಂಡನೆ: ಚಿಕ್ಕಮಗಳೂರಿನ ಬಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಹಾಗೂ ಕನಕ ಧಾಮದ ಈಶ್ವರಾನಂದಪುರಿ ಸ್ವಾಮೀಜಿ ಸಮಯ: ಮಧ್ಯಾಹ್ನ 2.30ಕ್ಕೆ

ಗೋಷ್ಠಿ 3: ರಂಗಭೂಮಿ ಅಧ್ಯಕ್ಷತೆ: ಬಿ.ವಿ.ರಾಜಾರಾಮ್‌ ಉದ್ಘಾಟನೆ: ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಪಕ ರಾಜಪ್ಪ ದಳವಾಯಿ ವಿಷಯ ಮಂಡನೆ: ಮೈಸೂರಿನ ರಂಗನಿರ್ದೇಶಕ ಸಿ.ಬಸವಲಿಂಗಯ್ಯ ಕಸಾಪ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್‌ ಸಮಯ: ಸಂಜೆ 4.20ಕ್ಕೆ ಸಾಂಸ್ಕೃತಿಕ ಸಂಜೆ ಅಧ್ಯಕ್ಷತೆ: ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಉದ್ಘಾಟನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಸಮಯ: ಸಂಜೆ 6ಕ್ಕೆ ಸ್ಥಳ: ಶಿವಕುಮಾರ ಬಯಲು ರಂಗಮಂದಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT