ಚಳ್ಳಕೆರೆ: ಹಿಂದಿನ ಮಳೆಗಾಲದ ವೇಳೆ, ಇಲ್ಲಿನ ಬಳ್ಳಾರಿ ರಸ್ತೆಯ ವೆಂಕಟೇಶ್ವರ ನಗರದ ಬಳಿ ಒಡೆದು ಹಾಕಿದ್ದ ಕೆರೆ ಕೋಡಿಯ ದುರಸ್ತಿ ಕಾರ್ಯ ಈವರೆಗೂ ನಡೆಯದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ನಗರದ ಮೇಲ್ಭಾಗದ ವಿವಿಧ ಹಳ್ಳಗಳಿಂದ ಹರಿದು ಬರುತ್ತಿದ್ದ ನೀರಿನಿಂದ ಕೆರೆಗೆ ಒಳಹರಿವು ದಿನದಿನಕ್ಕೂ ಹೆಚ್ಚುತ್ತಿತ್ತು. ಕೆರೆ ಒಡೆದು ಹೋಗುವ ಅಪಾಯ ಹಾಗೂ ಒಂದು ವೇಳೆ ಒಡೆದರೆ, ಕೆರೆಯ ಕೆಳ ಭಾಗದ ವಸತಿಪ್ರದೇಶಗಳು ಮುಳುಗಡೆಯಾಗುತ್ತವೆ ಎಂಬ ಕಾರಣಕ್ಕೆ ಕೋಡಿಯನ್ನು ಜೆಸಿಬಿ ಯಂತ್ರಗಳಿಂದ ಒಡೆಯಲಾಗಿತ್ತು.

ಕೆರೆ ಮತ್ತು ಜನವಸತಿ ಪ್ರದೇಶದ ಸಂರಕ್ಷಣೆ ಸಲುವಾಗಿ ಕೆರೆನೀರು ಹರಿದು ಹೋಗಲು ಸಣ್ಣ ನೀರಾವರಿ ಇಲಾಖೆ ಮತ್ತು ನಗರಸಭೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ಕೋಡಿಯಿಂದ ರಭಸವಾಗಿ ನೀರು ಹರಿದಿದ್ದರಿಂದ, ನಾಯಕಹನಟ್ಟಿ ಮಾರ್ಗದ ರಸ್ತೆಯ ಡಾಂಬರ್ ಮತ್ತು ಕಲ್ಲುಜಲ್ಲಿ ಕಿತ್ತು ಬಂದಿದ್ದವು. ರಸ್ತೆ ಹಾಳಾಗಿದ್ದ ಜತೆಗೆ ಅಲ್ಲಲ್ಲಿ ದೊಡ್ಡ ಗುಂಡಿಗಳುನಿರ್ಮಾಣವಾಗಿದ್ದವು. ಇದರಿಂದಾಗಿ ಚಳ್ಳಕೆರೆಯಿಂದ ನಾಯಕನಹಟ್ಟಿ, ಜಗಳೂರು ಮತ್ತು ದಾವಣಗೆರೆ ಕಡೆಗೆ ಸಂಚಾರ ನಡೆಸುವ ವಾಹನಗಳಿಗೆ ತೀವ್ರ ತೊಂದರೆ ಉಂಟಾಗಿತ್ತು.

ಈಗ ಮತ್ತೊಂದು ಮಳೆಗಾಲ ಸಮೀಪಿಸುತ್ತಿದ್ದರೂ ಕೋಡಿ ದುರಸ್ತಿ ಕಾಮಗಾರಿ ನಡೆದಿಲ್ಲ. ಈ ಬಾರಿಯ ಮಳೆಗಾದಲ್ಲಿ ಹರಿದು ಬರುವ ನೀರು, ಕೆರೆಯಿಂದ ಹೊರ ಹೋಗುತ್ತದೆ. ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ಅಂತರ್ಜಲದ ಮಟ್ಟ ಕುಸಿದು, ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ತಕ್ಷಣವೇ ಕೆರೆಕೋಡಿಯ ದುರಸ್ತಿಗೆ ಮುಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಒತ್ತಾಯಿಸಿದರು.

ಮಾದರಿ ಕೆರೆ ನಿರ್ಮಾಣಕ್ಕೆ ಯೋಜನೆ

‘ಒಡೆದಿರುವ ಕೆರೆ ಕೋಡಿಯ ದುರಸ್ತಿ ಕಾರ್ಯ ನಮ್ಮದಲ್ಲ ಆದರೆ ಮಾದರಿ ಕೆರೆಯನ್ನಾಗಿ ರೂಪಿಸುವ ಯೋಜನೆ ಪ್ರಗತಿಯಲ್ಲಿದೆ’ ಎಂದು ಎಂದು ನಗರಸಭೆ ಎಂಜಿನಿಯರ್ ನವೀನ್ ಕುಮಾರ್ ಹೇಳಿದರು. ‘ಅಪೂರ್ಣಗೊಂಡಿರುವ ವೃತ್ತಾಕಾರದ ಕಲ್ಲುಕಟ್ಟಡ ಸಿಮೆಂಟ್ ಬೆಂಚ್ ನಡಿಗೆ ಪಥ ವಿದ್ಯುತ್ ದೀಪ ಅಳವಡಿಕೆ ಮತ್ತು ಅಗತ್ಯವಿರುವ ಕಡೆಗೆ ಹೂಳೆತ್ತುವುದು ಕೆರೆಯ ಮಧ್ಯಭಾಗದಲ್ಲಿ ಐಲ್ಯಾಂಡ್ ನಿರ್ಮಾಣ ಸೇರಿದಂತೆ ಮಾದರಿ ಕೆರೆಯನ್ನಾಗಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಮೃತ್ 2.0 ಯೋಜನೆ ಮತ್ತು ಸ್ಥಳೀಯ ಸಂಸ್ಥೆಗಳ ಅನುದಾನ ಸೇರಿ ಒಟ್ಟು ₹3.20 ಕೋಟಿ ಅನುದಾನ ಕೆರೆ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. ಈಗಾಗಲೆ ಕ್ರಿಯಾಯೋಜನೆ ಅನುಮೋದನೆಗೊಂಡಿದ್ದು ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಅವರು ವಿವರಿಸಿದರು.

‘ತಾಂತ್ರಿಕ ಸಲಹೆ ಪಡೆದ ನಂತರ ಟೆಂಡರ್’

ಆಂಜನೇಯ ದೇವಸ್ಥಾನ ಮತ್ತು ಎಂಜಿನಿಯರಿಂಗ್ ಕಾಲೇಜು ಸಮೀಪ ಏರಿಯನ್ನು 3 ಅಡಿಯಷ್ಟು ಎತ್ತರ ಮಾಡಿಕೊಳ್ಳಬೇಕು. ಇಂಟರ್ ಲಾಕಿಂಗ್ ಪೇವರ್ ಜತೆಗೆ ಒಡೆದಿರುವ ಕೋಡಿ ದುರಸ್ತಿಗೆ ಡಿಎಂಎಫ್ ಯೋಜನೆಯಡಿ ₹ 1 ಕೋಟಿ ಅನುದಾನ ಬಳಕೆ ಮಾಡಲಾಗುವುದು. ತಾಂತ್ರಿಕ ಸಲಹೆ ಪಡೆದ ನಂತರ ಟೆಂಡರ್ ಕರೆದು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಚಿತ್ರದುರ್ಗದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಅಣ್ಣಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.