ನಾಯಕನಹಟ್ಟಿ: ಡಿಆರ್ಡಿಒ ಮತ್ತು ಐಐಎಸ್ಸಿ ಕ್ಯಾಂಪಸ್ಸಿನಲ್ಲಿ ಶುಕ್ರವಾರ ರಾತ್ರಿ ಎರಡು ಚಿರತೆಗಳು ಚಿರತೆ ಪ್ರತ್ಯಕ್ಷವಾಗಿದ್ದು, ಗಸ್ತು ಸಿಬ್ಬಂದಿ ಚಿರತೆಗಳ ಚಲನವಲನಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದ್ದಾರೆ.

ಅಂದಾಜು 10 ಸಾವಿರ ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಡಿಆರ್ಡಿಒ ಮತ್ತು ಐಐಎಸ್ಸಿ ಕ್ಯಾಂಪಸ್ಗಳಲ್ಲಿ ನಾಲ್ಕು ಚಿರತೆಗಳನ್ನು ಇಲ್ಲಿನ ಸ್ಥಳೀಯ ಕುರಿಗಾಹಿಗಳು ಹಲವು ಬಾರಿ ನೋಡಿದ್ದಾರೆ. ಸುಮಾರು 2 ವರ್ಷಗಳಿಂದ ಇಲ್ಲಿಯೇ ಆ ಚಿರತೆಗಳು ನೆಲೆ ಕಂಡುಕೊಂಡಿವೆ. ಡಿಆರ್ಡಿಒ ಮತ್ತು ಐಐಎಸ್ಸಿ ಸಂಸ್ಥೆಗಳು ತಮ್ಮದೇ ಆದ ಭದ್ರತಾ ಗೋಡೆಗಳನ್ನು ನಿರ್ಮಿಸಿಕೊಂಡು ಇಡೀ ಕ್ಯಾಂಪಸ್ ಸುತ್ತಲೂ 50 ಸಾವಿರ ಗಿಡಮರಗಳನ್ನು ನೆಡುತೋಪಾಗಿ ನೆಟ್ಟಿದ್ದಾರೆ. ಇದರಿಂದ ಹಸಿರು ಹೆಚ್ಚಾಗಿ ನೀರು ನೆರಳಿನ ವ್ಯವಸ್ಥೆ ಉತ್ತಮವಾಗಿದೆ.

ಈ ಹಿನ್ನೆಲೆಯಲ್ಲಿ ಚಿರತೆಗಳು ಇಲ್ಲಿಯೇ ನೆಲೆಕಂಡುಕೊಂಡಿವೆ. ಜತೆಗೆ ಅವುಗಳ ಆಹಾರಕ್ಕಾಗಿ ಕ್ಯಾಂಪಸ್ಸಿನಲ್ಲಿ ಸುಮಾರು 500ರಿಂದ 600 ಜಿಂಕೆಗಳು, ಮೊಲಗಳು ಸೇರಿದಂತೆ ಹಲವು ಕಾಡು ಜಾತಿಯ ಪ್ರಾಣಿಗಳಿದ್ದು, ಅವುಗಳನ್ನು ಬೇಟೆಯಾಡಿಕೊಂಡು ಇವೆ. ಇಲ್ಲಿಯವರೆಗೂ ಎರಡೂ ಕ್ಯಾಂಪಸ್ಸಿನ ಯಾರೊಬ್ಬರಿಗೂ ಯಾವುದೇ ರೀತಿಯಾದ ತೊಂದರೆ ನೀಡಿಲ್ಲ. ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಲವು ಬಾರಿ ಚಿರತೆಗಳನ್ನು ಹಿಡಿಯಲು ಬೋನ್ಗಳನ್ನು ಇಟ್ಟಿದ್ದರು. ಆದರೆ ಚಿರತೆಗಳು ಮಾತ್ರ ಸೆರೆಯಾಗಿಲ್ಲ.

ಆದರೆ ಶುಕ್ರವಾರ ಡಿಆರ್ಡಿಒ ಗಸ್ತುಗೋಪುರದ ರಕ್ಷಣಾ ಸಿಬ್ಬಂದಿಗೆ ಎರಡು ಚಿರತೆಗಳು ಪೊದೆಯಿಂದ ಆಚೆ ಬಂದು ಮುಖ್ಯರಸ್ತೆಯ ಪಕ್ಕದಲ್ಲಿರುವ ಪಾದಚಾರಿ ರಸ್ತೆಯ ಮೇಲೆ ಮಲಗಿ ನಂತರ ತೆರಳುತ್ತವೆ. ಇದನ್ನು ಗಸ್ತು ಸಿಬ್ಬಂದಿ ತಮ್ಮ ಮೊಬೈಲ್ನಲ್ಲಿ ಚಿರತೆಗಳ ಚಲನವಲನಗಳನ್ನು ಸೆರೆ ಹಿಡಿದಿದ್ದಾರೆ.

ಈ ಬಗ್ಗೆ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಚಿರತೆಗಳು ಓಡಾಡಿರುವ ದೃಶ್ಯಗಳು ಹರಿದಾಡಿವೆ. ಡಿಆರ್ಡಿಒ ಮತ್ತು ಐಐಎಸ್ಸಿ ಕ್ಯಾಂಪಸ್ ಸಮೀಪದ ರೈತರು ಆತಂಕಕ್ಕೊಳಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.