ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್ ವೈದ್ಯರೇ ಆಗಿರುವುದು ವೈದ್ಯಕೀಯ ಕಾಲೇಜು ಸ್ಥಳಾಂತರಕ್ಕೆ ಅನುಕೂಲವಾಗಲಿದೆ. ವೈದ್ಯಕೀಯ ಕಾಲೇಜಿಗೆ ಬೇಕಾದ ಅವಶ್ಯಕತೆಗಳು ಕಾಲೇಜು ಸ್ಥಳಾಂತರದ ನೀತಿ ನಿಯಮಗಳು ಅವರಿಗೆ ಗೊತ್ತಿವೆ. ಅವರು ಸಲಹೆ ಸೂಚನೆ ನೀಡಲಿದ್ದು ಚಟುವಟಿಕೆಗಳು ವೇಗವಾಗಿ ನಡೆಯಲು ಸಹಾಯಕವಾಗಲಿದೆ. ಈ ವೇಳೆಯಲ್ಲಿ ಅವರು ನಮ್ಮ ಜಿಲ್ಲೆಗೆ ಬಂದಿರುವುದು ಒಳ್ಳೆಯದೇ ಆಯಿತು’ ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು.