ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: 'ಜಿಹ್ವೇಶ್ವರ ಮಂದಿರ ನಿರ್ಮಾಣಕ್ಕೆ ಕ್ರಮ'

ಸ್ವಕುಳಸಾಳಿ ಗುರುಪೀಠದಲ್ಲಿ ಮುಖಂಡರ ಸಭೆ
Published 23 ಜೂನ್ 2024, 16:07 IST
Last Updated 23 ಜೂನ್ 2024, 16:07 IST
ಅಕ್ಷರ ಗಾತ್ರ

ಮೊಳಕಾಲ್ಮರು: ಇಲ್ಲಿನ ಸ್ವಕುಳಸಾಳಿ ನೇಕಾರ ಸಮುದಾಯದ ರಾಜ್ಯಮಟ್ಟದ ಗುರುಪೀಠದ ಆವರಣದಲ್ಲಿ ಸಮಾಜದ ಮೂಲ ಪುರುಷ ಜೀಹ್ವೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಲು ಮುಖಂಡರು ತೀರ್ಮಾನಿಸಿದರು.

ಭಾನುವಾರ ಮಠಕ್ಕೆ ಹರಿದ್ವಾರದಿಂದ ಆಗಮಿಸಿದ್ದ ಕರಣಗಿರಿ ಮಹಾರಾಜ್‌ ಸ್ವಾಮೀಜಿ ಅವರನ್ನು ಸನ್ಮಾನಿಸಿದ ನಂತರ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು.

ಜೀಹೇಶ್ವರ ಮಂದಿರ ನಿರ್ಮಾಣಕ್ಕೆ ಈಚೆಗೆ ದಾವಣಗೆರೆಯಲ್ಲಿ ನಡೆದ ಸಮುದಾಯದ ರಾಜ್ಯಮಟ್ಟದ ಸಭೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಇದಕ್ಕೆ ಬೆಂಗಳೂರಿನ ಆನೇಕಲ್‌ನ ವಾಸ್ತುಶಾಸ್ತ್ರ ಪರಿಣಿತೆ ವಿನುತಾ ರಾಜೇಶ್‌ ಸವ್ವಾಸೇರೆ ಅವರು ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ಸೂಚಿಸಿ ಕೈಗೊಳ್ಳಬೇಕಾದ ಆಚರಣೆಗಳ ಬಗ್ಗೆ ತಿಳಿಸಿದ್ದಾರೆ. ಅನೇಕ ದಾನಿಗಳು ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್.‌ ಬಂಢಾರೆ ಹೇಳಿದರು.

ರಾಜ್ಯ ಘಟಕದ ಉಪಾಧ್ಯಕ್ಷೆ ಗುರುನಾಥ ಪ್ರಾಣಿಭಾತೆ, ಸ್ಥಳೀಯ ಮುಖಂಡರಾದ ಡಿ.ಎಂ. ಈಶ್ವರಪ್ಪ, ವಾಂಜ್ರೆ ರಮೇಶ್‌, ಅಶೋಕ್‌ ಗಾಯಕ್‌ ವಾಡ್‌, ಶ್ರೀಧರ ಸಫಾರೆ, ಪ್ರದೀಪ್‌ ಕಾಂಳ್ಬೆ, ಗಿರೀಶ್‌ ಪ್ರಾಣಿಭಾತೆ, ಶುಭಾ, ಡಿಶ್‌ ರಾಜು, ಪ್ರೇಮಾ ಕಾಂಬ್ಲೆ, ಗುರುಮೂರ್ತಿ ಏಕಬೋಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT