ಚಿತ್ರದುರ್ಗ: ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಅ.8ರಿಂದ 12ರವರೆಗೆ ಐದುದಿನ ಆಯೋಜಿಸಿದ್ದ ರಾಷ್ಟ್ರಮಟ್ಟದ ಆಹ್ವಾನಿತ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯನ್ನು ಮಳೆಯ ಕಾರಣಕ್ಕೆ ರದ್ದುಪಡಿಸಲಾಗಿದೆ.

‘ಭಾರತೀಯ ವಾಲಿಬಾಲ್ ಫೆಡರೇಷನ್ ಪ್ರತಿನಿಧಿಗಳಾದ ಆಂಥೋನಿ ಜೋಸೆಫ್ ಹಾಗೂ ಶ್ರೀಧರನ್ ಅವರು ಗುರುವಾರ ಚಿತ್ರದುರ್ಗಕ್ಕೆ ಭೇಟಿ ನೀಡಿ ಮೈದಾನ ಪರಿಶೀಲಿಸಿದರು. ಆಟ ಆಡುವುದು ಅಸಾಧ್ಯವೆಂದು ಶಿಫಾರಸು ಮಾಡಿದ್ದರಿಂದ ಟೂರ್ನಿಯನ್ನು ಮುಂದೂಡಲಾಗಿದೆ. 2022ರ ಜನವರಿ ಅಥವಾ ಫೆಬ್ರುವರಿಯಲ್ಲಿ ಟೂರ್ನಿ ಆಯೋಜಿಸಲಾಗುವುದು’ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾಹಿತಿ ನೀಡಿದರು.

‘ಪುರುಷರ ವಿಭಾಗದಲ್ಲಿ ಆರು ಹಾಗೂ ಮಹಿಳೆಯರ ವಿಭಾಗದಲ್ಲಿ ಐದು ತಂಡಗಳನ್ನು ಟೂರ್ನಿಗೆ ಆಹ್ವಾನಿಸಲಾಗಿತ್ತು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದರು. ಕರ್ನಾಟಕಕ್ಕೆ ಪ್ರಯಾಣ ಆರಂಭಿಸಿದ್ದ ಹರಿಯಾಣ ತಂಡ ದೆಹಲಿಯನ್ನು ಹಾಗೂ ಸಿಕ್ಕಿಂ ತಂಡ ಕೋಲ್ಕತ್ತ ತಲುಪಿತ್ತು. ಟೂರ್ನಿ ರದ್ದಾಗಿದ್ದರಿಂದ ತಂಡಗಳು ತಮ್ಮ ರಾಜ್ಯಗಳಿಗೆ ಮರಳಿದವು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.