ನಾಯಕನಹಟ್ಟಿ: ರಷ್ಯಾದ ಸೋಚಿಯಲ್ಲಿ ವರ್ಷಾಂತ್ಯಕ್ಕೆ ನಡೆಯುವ ಅಂತರರಾಷ್ಟ್ರೀಯ ಜೂನಿಯರ್ ವಿಜ್ಞಾನ ಒಲಿಂಪಿಯಾಡ್ ಸ್ಪರ್ಧೆಗೆ ಭಾರತದಿಂದ 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕುದಾಪುರದ ಐಐಎಸ್ಸಿ ಪ್ರತಿಭಾ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಸುಬ್ಬಾರೆಡ್ಡಿ ಹೇಳಿದರು.

ಹೋಬಳಿಯ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರತಿಭಾ ಅಭಿವೃದ್ಧಿ ಕೇಂದ್ರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂತರರಾಷ್ಟ್ರೀಯ ಜೂನಿಯರ್ ವಿಜ್ಞಾನ ಒಲಿಂಪಿಯಾಡ್ ಪ್ರತಿಷ್ಠಿತ ಸಮಾವೇಶದಲ್ಲಿ ವಿಶ್ವದ 60ಕ್ಕೂ ಹೆಚ್ಚು ರಾಷ್ಟ್ರಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಸ್ಪರ್ಧೆಗೆ ವಿದ್ಯಾರ್ಥಿಗಳ ಆಯ್ಕೆಗೆ ನ್ಯಾಷನಲ್ ಸ್ಟ್ಯಾಂಡರ್ಡ್ ಎಕ್ಸಾಮಿನೇಷನ್ ಇನ್ ಜೂನಿಯರ್ ಸೈನ್ಸ್ ಸಂಸ್ಥೆಯು 2024ರ ನವೆಂಬರ್ನಲ್ಲಿ 15 ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಿತ್ತು.

ದೇಶದ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 500 ವಿದ್ಯಾರ್ಥಿಗಳನ್ನು ಮಾತ್ರ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. 2025ರ ಫೆಬ್ರುವರಿ 1ರಂದು ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಿ 500 ವಿದ್ಯಾರ್ಥಿಗಳ ಪೈಕಿ 36 ವಿದ್ಯಾರ್ಥಿಗಳನ್ನು ಮತ್ತೊಂದು ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಹೀಗೆ ಆಯ್ಕೆಯಾದ 36 ವಿದ್ಯಾರ್ಥಿಗಳಿಗೆ ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವ ವಿಜ್ಞಾನದಲ್ಲಿ ಲಿಖಿತ ಮತ್ತು ಪ್ರಾಯೋಗಿಕ ಪಠಿಣ ಪರೀಕ್ಷೆ ನೀಡಲಾಗಿತ್ತು. ವಿದ್ಯಾರ್ಥಿಗಳ ಪರಿಕಲ್ಪನೆ, ತಿಳಿವಳಿಕೆ, ಜ್ಞಾನದ ಅನ್ವಯ ಮತ್ತು ವಿಜ್ಞಾನದಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು ಪರೀಕ್ಷಿಸಲಾಗಿತ್ತು. ಕುದಾಪುರದ ಐಐಎಸ್ಸಿ ಕ್ಯಾಂಪಸ್ನಲ್ಲಿ 15 ದಿನ ತರಬೇತಿ ಶಿಬಿರ ನಡೆಸಿ, 36 ವಿದ್ಯಾರ್ಥಿಗಳ ಪೈಕಿ ಅಂತಿಮವಾಗಿ 6 ವಿದ್ಯಾರ್ಥಿಗಳನ್ನು ಅಂತರರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್ಗೆ ಆಯ್ಕೆ ಮಾಡಲಾಗಿದೆ.

ವಿದ್ಯಾರ್ಥಿಗಳಾದ ಹರಿಯಾಣದ ಆದಿಶ್ ಜೈನ್, ಪಂಜಾಬ್ನ ಅನ್ಮೋಲ್ ಕುಮಾರ್, ಮಹಾರಾಷ್ಟ್ರದ ಅಸ್ಮಿ ಇನಾಂದಾರ್, ಒಡಿಶಾದ ರುಹಾನ್ ಮೊಹಂತಿ, ತೆಲಂಗಾಣದ ಸಾಯಿ ಶರವಣ್ ಮಾವಲ್ಲ, ತಮಿಳುನಾಡಿನ ಎಸ್.ವಿ.ತೇಜಸ್ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇವರ ಜತೆಗೆ, ಸಂಶೋಧಕ ವಿಜ್ಞಾನಿಗಳಾದ ಡಾ.ಶಿರೀಶ್ ಪಠಾರೆ, ಡಾ.ವೇದವ್ಯಾಸ, ಡಾ.ಎಸ್.ಅರವಿಂದ, ಡಾ.ಆರ್.ಎಸ್.ಗೀತಾ ವೈಜ್ಞಾನಿಕ ವೀಕ್ಷಕರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಭೌತವಿಜ್ಞಾನ ಶಿಕ್ಷಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರೊ.ರೇಖಾ ಘೋರ್ಪಡೆ, ಸಂಚಾಲಕರಾದ ಬಿ.ಎಸ್.ಅಚ್ಯುತ, ಎಂ.ಕೆ.ರಾಘವೇಂದ್ರ, ಪ್ರೊ.ವಿನಾಯಕ ಕಟ್ದಾರೆ, ಎಸ್.ರೇಖಾ, ಪ್ರೊ.ಅರವಿಂದ, ಪ್ರೊ. ಶ್ರೀನಾಥ್, ಎಂಜಿನಿಯರ್ ಹೇಮಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.