ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಒನಕೆ ಓಬವ್ವ ಜಯಂತಿಗೆ ಆದೇಶ

Last Updated 9 ನವೆಂಬರ್ 2021, 13:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಒನಕೆ ಓಬವ್ವ ಜಯಂತಿಯನ್ನು ನ.11ರಂದು ರಾಜ್ಯದಾದ್ಯಂತ ಆಚರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.

‘ಚಿತ್ರದುರ್ಗದ ಇತಿಹಾಸದಲ್ಲಿ ಒನಕೆ ಓಬವ್ವಳ ಹೆಸರು ಮರೆಯಲು ಸಾಧ್ಯವಿಲ್ಲ. ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಓಬವ್ವ ಒಬ್ಬರು ಎಂದು ಪರಿಗಣಿಸಲಾಗಿದೆ. ಓಬವ್ವಳ ಜನ್ಮದಿನವಾದ ನ.11ರಂದು ಜಯಂತಿ ಆಚರಣೆ ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಿದೆ.

‘18ನೇ ಶತಮಾನದಲ್ಲಿ ಚಿತ್ರದುರ್ಗದ ಪಾಳೆಗಾರ ಮದಕರಿನಾಯಕನ ಕೋಟೆಯ ಕಾವಲುಗಾರನಾಗಿದ್ದ ಮುದ್ದಹನುಮಪ್ಪನ ಪತ್ನಿ ಓಬವ್ವ. ಹೈದರಾಲಿ ಸೇನೆ ಕೋಟೆಯ ಮೇಲೆ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನೇ ಅಸ್ತ್ರವನ್ನಾಗಿ ಬಳಸಿದಳು. ಕೋಟೆಯ ಕಿಂಡಿಯಿಂದ ನುಸುಳುತ್ತಿದ್ದ ಶತ್ರು ಸೈನಿಕರನ್ನು ಕೊಂದು ಹಾಕಿದಳು’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT