ಹೊಸದುರ್ಗ: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಮುಂದಾಗಿದ್ದು, ಪಟ್ಟಣದ ಎಪಿಎಂಸಿ ಆವರಣದಲ್ಲಿ ಖರೀದಿಗಾಗಿ ಮಂಗಳವಾರದಿಂದ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.

ತಾಲ್ಲೂಕಿನ ಶ್ರೀರಾಂಪುರ ಹಾಗೂ ಪಟ್ಟಣದ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ನಿತ್ಯ ನೂರಾರು ರೈತರು ಬಂದು ಸುರದಿ ಸಾಲಿನಲ್ಲಿ ನಿಂತು, ರಾಗಿ ಖರೀದಿಗಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಸರ್ಕಾರ ರಾಗಿ ಬೆಳೆಗೆ ಕ್ವಿಂಟಲ್ಗೆ ₹ 4,886 ರಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಪ್ರತಿ ರೈತರಿಂದ ಭೂ ಹಿಡುವಳಿಯನ್ನಾಧರಿಸಿ ಎಕರೆಗೆ ಕನಿಷ್ಠ 10 ಕ್ವಿಂಟಾಲ್ ನಂತೆ ಗರಿಷ್ಠ 50 ಕ್ವಿ. ರಾಗಿ ಖರೀದಿಸಲಾಗುವುದು. ಡಿ. 15 ರವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಜನವರಿ 1 ರಿಂದ ರಾಗಿ ಖರೀದಿ ಮಾಡಲಾಗುವುದು. ಈ ಬಾರಿ ನೋಂದಣಿ ಪ್ರಕ್ರಿಯೆ ಬಹುಬೇಗ ಆರಂಭವಾಗಿದೆ. ಎಫ್.ಐ.ಡಿ ಕಡ್ಡಾಯವಾಗಿ ಬೇಕು, ಇದರಲ್ಲಿ ರಾಗಿ ಎಂದು ನೋಂದಾಯಿಸಿರಬೇಕು. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಸುಗಮ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳಿ ಎಂದು ಎಸ್.ಕೆ. ಮಲ್ಲಿಕಾರ್ಜುನ, ಕ.ಆ.ನಾ.ಸ.ನಿ.ನಿ ಜಿಲ್ಲಾ ವ್ಯವಸ್ಥಾಪಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.