ಚಿತ್ರದುರ್ಗ: ‘ರಾಜ್ಯದಲ್ಲಿ ಅಂದಾಜು 4.20 ಲಕ್ಷ ನಿವೃತ್ತ ನೌಕರರು, 1 ಲಕ್ಷ ಕುಟುಂಬ ಪಿಂಚಣಿದಾರರಿದ್ದಾರೆ. ಇವರಿಗೆ ಪ್ರಮುಖವಾಗಿ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲಾಗಿದೆ. ಹೀಗಾಗಿ ನಗದು ರಹಿತ ‘ಸಂಧ್ಯಾ ಕಿರಣ’ ಯೋಜನೆಯನ್ನು ನಿವೃತ್ತ ನೌಕರರಿಗೂ ಅನುಷ್ಠಾನಗೊಳಿಸಬೇಕು’ ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಅಧ್ಯಕ್ಷ ಎಲ್.ಬೈರಪ್ಪ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ನಗರದ ವಿನಾಯಕ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಪದಾಧಿಕಾರಿಗಳ ಮತ್ತು ನಿವೃತ್ತ ನೌಕರರ ಹಾಗೂ ಕುಟುಂಬ ಪಿಂಚಿಣಿದಾರರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

‘7ನೇ ವೇತನ ಆಯೋಗವು ತನ್ನ ವರದಿಯಲ್ಲಿ ನಿವೃತ್ತ ನೌಕರರ ಪರವಾಗಿ ಹಲವು ಶಿಫಾರಸು ಮಾಡಿದೆ. ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ, 70 ವರ್ಷ ಮೇಲ್ಪಟ್ಟು 80 ವರ್ಷದೊಳಗಿನವರಿಗೆ ಶೇ 10ರಷ್ಟು ಮೂಲ ಪಿಂಚಣಿಯಲ್ಲಿ ಆರ್ಥಿಕ ಸೌಲಭ್ಯ ನೀಡುವಂತೆ ಹೇಳಿದೆ. ರಾಜ್ಯ ಸರ್ಕಾರ ಇದನ್ನು ಕೂಡಲೇ ಅನುಷ್ಠಾನ ಮಾಡಬೇಕು’ ಎಂದು ಆಗ್ರಹಿಸಿದರು.

‘ನೌಕರರು ನಿಧನ ಹೊಂದಿದಾಗ ಅಂತಿಮ ವಿಧಿ ವಿಧಾನಗಳ ವೆಚ್ಚಕ್ಕಾಗಿ ₹ 25,000 ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ನಿಧನ ಹೊಂದಿದಾಗ ₹ 10,000 ನೀಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ ‘ನಿವೃತ್ತ ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗಾಗಿ ಸರ್ಕಾರಿ ನೌಕರರ ಸಂಘ ಸದಾ ಹೋರಾಟ ನಡೆಸುತ್ತದೆ. ನೌಕರರು ನಿವೃತ್ತರಾದ ನಂತರವೂ ಸಂಘಟನೆ ಅವರ ಜೊತೆ ಸದಾ ನಿಲ್ಲುತ್ತದೆ. ಹಲವು ನೌಕರರು ಸರ್ಕಾರಿ ಸೇವೆಯಲ್ಲಿ ಉತ್ತಮ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದಾರೆ. ಮಾಡಿದ ಕೆಲಸದಿಂದ ಸರ್ಕಾರದಲ್ಲಿ ಉತ್ತಮ ಕೆಲಸಗಳಾಗಿವೆ’ ಎಂದರು.

‘ವಿವಿಧ ಯೋಜನೆಗಳು ಶೀಘ್ರವಾಗಿ ಜಾರಿಯಾಗುವುದರಲ್ಲಿ ನೌಕರರ ಸೇವೆ ಮುಖ್ಯವಾದುದು. ನಿವೃತ್ತಿಯ ನಂತರ ನೌಕರರ ಸೇವೆಯನ್ನು ನಿರ್ಲಕ್ಷ್ಯ ಮಾಡಬಾರದು. ಸರ್ಕಾರ ನಿವೃತ್ತರ ಸೇವೆಯನ್ನು ಪರಿಗಣಸಿಬೇಕಿದೆ. ಸರ್ಕಾರ ನೌಕರರಿಗೆ ವಿವಿಧ ರೀತಿಯ ಸೌಲಭ್ಯ ನೀಡುತ್ತಿದೆ. ಅದರಂತೆ ನಿವೃತ್ತರಿಗೂ ಸೌಲಭ್ಯ ಒದಗಿಸಬೇಕಾಗಿದೆ. 60 ವರ್ಷ ಎಂಬುದು ಬರೀ ಸಂಖ್ಯೆ ಮಾತ್ರ. ಆದರೆ ನೌಕರರ ಅನುಭವ, ಸಲಹೆ, ಸೂಚನೆಗಳು 60ರ ನಂತರವೂ ಮುಂದುವರಿಯುತ್ತವೆ’ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ್ ಮುದ್ದಜ್ಜಿ ಮಾತನಾಡಿ ‘ಬೇಡಿಕೆ ಈಡೇರಿಕೆಗೆ ಇಂತಹ ಸಮಾವೇಶಗಳು ಸದಾ ನಡೆಯಬೇಕು. ಇದಕ್ಕೆ ಬೇಕಾದ ಸಹಕಾರವನ್ನು ನಿರಂತರವಾಗಿ ನೀಡಲಾಗುವುದು. ನಿವೃತ್ತ ನೌಕರರ ಮಾರ್ಗದರ್ಶನ ನಮಗೆ ಅಗತ್ಯವಾಗಿದೆ. ಸಮಾಜದ ಅಭಿವೃದ್ಧಿಯಲ್ಲಿ ನಿವೃತ್ತ ನೌಕರರ ಸಹಕಾರ, ಸಲಹೆಗಳು ಅತೀ ಮುಖ್ಯವಾಗಿವೆ’ ಎಂದರು.

ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ಪ್ರೇಮನಾಥ್ ಮಾತನಾಡಿ ‘ನಮ್ಮ ಬೇಡಿಕೆ ಈಡೇರುವ ಸಲುವಾಗಿ ಸಂಘಟನೆ ಅಗತ್ಯವಿದೆ. ನಮ್ಮ ಕಷ್ಟ ಸುಖಗಳನ್ನು ಸರ್ಕಾರ ಆಲಿಸುತ್ತಿಲ್ಲ. ಇದರ ವಿರುದ್ಧ ಬೃಹತ್ ಹೋರಾಟ ರೂಪಿಸಬೇಕಾಗಿದೆ. ಸಂಘವನ್ನು ಬಲಗೊಳಿಸಬೇಕಿದೆ’ ಎಂದರು.

ತುಮಕೂರು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರಮಾಕುಮಾರಿ, ನಿವೃತ್ತ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ನಾಗೇಂದ್ರಪ್ಪ, ಜಿಲ್ಲಾ ಪ್ರಧಾನ ಕಾಯದರ್ಶಿ ತಿಮ್ಮಪ್ಪ, ಖಜಾಂಚಿ ಆನಂದಪ್ಪ, ಪ್ರಧಾನ ಕಾರ್ಯದರ್ಶಿ ರಂಗೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.