ಹೊಳಲ್ಕೆರೆ (ಚಿತ್ರದುರ್ಗ): ತಾಲ್ಲೂಕಿನ ತಿರುಮಲಾಪುರ ಶಾಲೆಯ ಶಿಕ್ಷಕ ಎನ್.ಸಿ.ಬಸವಕುಮಾರ್ ಐದೇ ದಿನದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಮುಗಿಸಿದ್ದು, ಇದನ್ನು ಪೂರ್ಣಗೊಳಿಸಿದ ತಾಲ್ಲೂಕಿನ ಮೊದಲ ಸಮೀಕ್ಷಕ ಎನಿಸಿದ್ದಾರೆ.

ತಹಶೀಲ್ದಾರ್ ವಿಜಯ ಕುಮಾರ್ ಅವರು ಇವರನ್ನು ಭಾನುವಾರ ಸನ್ಮಾನಿಸಿದರು.

‘ಬದ್ಧತೆ ಇದ್ದರೆ ಎಂತಹ ಕೆಲಸವನ್ನಾದರೂ ಸಮರ್ಥವಾಗಿ ನಿಭಾಯಿಸಬಹುದು. ಬಸವ ಕುಮಾರ್ ಕರ್ತವ್ಯ ಪ್ರಜ್ಞೆ ಮಾದರಿಯಾಗಲಿ’ ಎಂದು ವಿಜಯಕುಮಾರ್ ಹೇಳಿದರು.

‘ಮೊದಲ ಎರಡು ದಿನ ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ನಂತರದ 5 ದಿನಗಳಲ್ಲಿ ನನಗೆ ನಿಗದಿ ಮಾಡಿದ್ದ 83 ಕುಟುಂಬಗಳ ಸಮೀಕ್ಷಾ ಕಾರ್ಯ ಮುಗಿಸಿದ್ದೇನೆ. ಬೆಳಿಗ್ಗೆ 8ರಿಂದಲೇ ಆರಂಭಿಸಿ ರಾತ್ರಿಯವರೆಗೆ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಯಿತು’ ಎಂದು ಬಸವಕುಮಾರ್ ತಿಳಿಸಿದರು.

ಬಿಸಿಎಂ ಕಲ್ಯಾಣಾಧಿಕಾರಿ ಪ್ರದೀಪ್ ಕುಮಾರ್, ಬಿಆರ್ಸಿ ಸುರೇಂದ್ರ ನಾಥ್, ಪದವೀಧರ ಶಿಕ್ಷಕರ ಸ೦ಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಜಯಪ್ಪ, ಚಿತ್ರಹಳ್ಳಿ ದೇವರಾಜು, ಸಮೀಕ್ಷಾ ಮೇಲ್ವಿಚಾರಕಿ ರೂಪಾ, ಪುನಿತ್ ಕುಮಾರ್, ರಾಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.