ಶನಿವಾರ, ಏಪ್ರಿಲ್ 4, 2020
19 °C
ಬೀಳುವ ಹಂತ ತಲುಪಿದ ಸೂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳು

ಇಲ್ಲಿ ಕೊಠಡಿಗಳಿಲ್ಲ; ಬಯಲಲ್ಲೇ ಬೋಧನೆ

ವಿ.ವೀರಣ್ಣ ಧರ್ಮಪುರ Updated:

ಅಕ್ಷರ ಗಾತ್ರ : | |

prajavani

ಧರ್ಮಪುರ: ಸಮೀಪದ ಸೂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲಾ ಕೊಠಡಿಗಳಿಲ್ಲದೆ ಮರದಡಿ ಪಾಠ ಕೇಳುವಂತ ಪರಿಸ್ಥಿತಿ ಇದೆ.

ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಒಟ್ಟು 100 ವಿದ್ಯಾರ್ಥಿಗಳು ಕಲಿಕೆಯನ್ನು ಮುಂದುವರೆಸಿದ್ದಾರೆ. ಶಾಲೆಯಲ್ಲಿ 6 ಕೊಠಡಿಗಳಿದ್ದರೂ ಕಳೆದ 10 ವರ್ಷಗಳಿಂದ ಬೀಳುವ ಹಂತ ತಲುಪಿವೆ.

‘1ನೇ ತರಗತಿಯಿಂದ ನಾನು ಇದೇ ಶಾಲೆಯಲ್ಲಿಯೇ ಓದುತ್ತಿದ್ದೇನೆ. ಈಗ 7ನೇ ತರಗತಿಯಲ್ಲಿದ್ದು, ಕಳೆದ ಏಳೆಂಟು ವರ್ಷಗಳಿಂದ ಎಲ್ಲ ವಿದ್ಯಾರರ್ಥಿಗಳು ಮರದಡಿಯೇ ಪಾಠ ಕೇಳುತ್ತಿದ್ದೇವೆ’ ಎಂದು ಎಚ್.ಎನ್.ಸ್ವಾತಿ ಹೇಳಿದರು.

ಈ ಬಗ್ಗೆ ಶಾಲೆಗೆ ಭೇಟಿ ನೀಡುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಅವರಿಂದ ಬರೀ ಆಶ್ವಾಸನೆಗಳೆ ಸಿಕ್ಕಿವೆ ವಿನಃ ಫಲಪ್ರದ ದೊರೆತಿಲ್ಲ. ಕಳೆದ ಐದಾರು ತಿಂಗಳ ಹಿಂದೆ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಕಾರ್ಯಕ್ರಮ ನಿಮಿತ್ತ ಸೂಗೂರು ಗ್ರಾಮಕ್ಕೆ ಹೋಗಿದ್ದಾಗ ಈ ಶಾಲೆಗೆ ಭೇಟಿ ನೀಡಿ. ಮರದಡಿ ಕುಳಿತುಕೊಂಡಿದ್ದ ವಿದ್ಯಾರ್ಥಿಗಳಿಗೆ ಅವರೂ ಪಾಠ ಮಾಡಿದ್ದ ಸುದ್ದಿ ಪ್ರಕಟವಾಗಿತ್ತು. ತುರ್ತಾಗಿ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆಯನ್ನೂ ನೀಡಿದ್ದರು. ಆದರೆ ಈತನಕ ಯಾವುದೇ ಪ್ರಯೋಜನವಾಗಿಲ್ಲ. ಎಂಬ ನೋವು ಪೋಷಕರು ಮತ್ತು ವಿದ್ಯಾರ್ಥಿಗಳದ್ದು.

ಈಗಲಾದರೂ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಅಪಾಯ ಸಂಭವಿಸುವ ಮೊದಲೇ ಹಾಳಾಗಿರುವ ಶಾಲಾ ಕೊಠಡಿಗಳನ್ನು ನೆಲಸಮ ಮಾಡಿ, ಹೊಸ ಕೊಠಡಿಗಳನ್ನು ನಿರ್ಮಿಸಲಿ ಎಂದು ಸೂಗೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು