ಶನಿವಾರ, ಸೆಪ್ಟೆಂಬರ್ 26, 2020
23 °C

ವಿಡಿಯೊ ಕಾಲ್‌ ಗುಟ್ಟು ರಟ್ಟು: ವಿವಾಹವಾದ ಎರಡೇ ತಿಂಗಳಲ್ಲಿ ಪತ್ನಿಯ ಕೊಂದ ಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಮೆಟ್ಟಿಲಹೊಳೆ ಗ್ರಾಮದ ಕುಟುಂಬವೊಂದರಲ್ಲಿ ಉಂಟಾದ ವೈಮನಸ್ಸಿನಿಂದ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ವಿವಾಹವಾದ ಎರಡೇ ತಿಂಗಳಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಕೊಲೆಗೈದ ಪತಿಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ಮೆಟ್ಟಿಲಹೊಳೆ ಗ್ರಾಮದ ಉಮಾ (19) ಕೊಲೆಯಾದ ಮಹಿಳೆ. ಪತಿ ಚಂದ್ರಪ್ಪ (27) ಬಂಧಿತ ಆರೋಪಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದ್ದಾರೆ.

‘ಚಂದ್ರಪ್ಪ ಹಾಗೂ ಉಮಾ ಮೇ 28ರಂದು ವಿವಾಹವಾಗಿದ್ದರು. ಎರಡು ತಿಂಗಳಿಂದ ಇಬ್ಬರು ಅನ್ಯೊನ್ಯವಾಗಿದ್ದರು. ಇತ್ತೀಚೆಗೆ ಮತ್ತೊಬ್ಬ ಮಹಿಳೆಯೊಂದಿಗೆ ಪತಿ ವಿಡಿಯೊ ಕಾಲ್‌ನಲ್ಲಿ ಮಾತನಾಡುತ್ತಿರುವುದನ್ನು ಉಮಾ ಗಮನಿಸಿದ್ದರು. ಈ ಬಗ್ಗೆ ಇಬ್ಬರ ನಡುವೆ ವೈಮಸ್ಸು ಉಂಟಾಗಿತ್ತು. ಇದನ್ನು ಉಮಾ ಅವರು ಪೋಷಕರಿಗೆ ತಿಳಿಸಿದ್ದರು’ ಎಂದು ರಾಧಿಕಾ ವಿವರಿಸಿದರು.

‘ಜುಲೈ 28ರಂದು ಟಿ.ವಿ ನೋಡುವ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ಶುರುವಾಗಿದೆ. ಪತ್ನಿಯ ಕೆನ್ನೆಗೆ ಚಂದ್ರಪ್ಪ ಬಲವಾಗಿ ಹೊಡೆದಿದ್ದಾನೆ. ಪ್ರಜ್ಞೆ ತಪ್ಪಿದ ಬಳಿಕ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವಂತೆ ಬಿಂಬಿಸಲು ಪ್ರಯತ್ನಿಸಿದ್ದಾನೆ. ಮೂಗು ಹಾಗೂ ಬಾಯಿಯಲ್ಲಿ ರಕ್ತ ಸುರಿದಿದ್ದರಿಂದ ಅನುಮಾನಗೊಂಡ ಉಮಾ ಪೋಷಕರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದಾಗ ಚಂದ್ರಪ್ಪ ತಪ್ಪೊಪ್ಪಿಕೊಂಡಿದ್ದಾನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು