ಚಿತ್ರದುರ್ಗ: ಜಿಲ್ಲೆಯಾದ್ಯಂತ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು ಶೀತಗಾಳಿ ಸಾರ್ವಜನಿಕರಿಗೆ ಕಚಗುಳಿ ಕೊಡುತ್ತಿದೆ. ಚುಮುಚುಮು ಚಳಿಯಿಂದ ದೇಹ ಸಂರಕ್ಷಣೆ ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಈ ಬಾರಿ ಕಾರ್ತಿಕ ಮಾಸದಲ್ಲೂ ಚಳಿ ಅಷ್ಟಾಗಿ ಕಾಡಲಿಲ್ಲ. ಮುಂಜಾನೆ ಬಲುಬೇಗ ಬಿಸಿಲು ಬರುತ್ತಿದ್ದ ಕಾರಣ ಚಳಿಯ ನಡುವೆಯೂ ಜನರು ತಿಳಿ ಬಿಸಿಲಿನ ಸ್ಪರ್ಶ ಅನುಭವಿಸುತ್ತಿದ್ದರು. ಡಿಸೆಂಬರ್ ಆರಂಭವಾದ ನಂತರ ಚಳಿ ಹೆಚ್ಚಾಗಿದ್ದು ಜನರು ಹಾಸಿಗೆಯಿಂದ ಮೇಲೇಳಲು ಕಷ್ಟು ಪಡುತ್ತಿದ್ದಾರೆ. ದಟ್ಟ ಮಂಜು ಆವರಿಸಿಕೊಳ್ಳುತ್ತಿದ್ದು ಬೆಳಗಿನ ವಿಹಾರಕ್ಕೆ ತೆರಳುತ್ತಿದ್ದ ಜನರು ಈಗ ಕೊಂಚ ಬಿಡುವು ಪಡೆದುಕೊಂಡಿದ್ದಾರೆ.

ಚುಮುಚುಮು ಚಳಿಯ ಕಾರಣಕ್ಕೆ ಜಿಲ್ಲೆಯ ವಿವಿಧೆಡೆ ಪಾರ್ಕ್ಗಳು, ಆಟದ ಮೈದಾನಗಳು, ಜಿಮ್, ಈಜುಕೊಳಗಳು ಬಿಕೋ ಎನ್ನುತ್ತಿವೆ. ಸದಾ ಜನರಿಂದ ಗಿಜಿಗುಡುತ್ತಿದ್ದ ಜಿಲ್ಲಾ ಕ್ರೀಡಾಂಗಣ, ಜೋಗಿಮಟ್ಟಿ ಅರಣ್ಯ ಪ್ರದೇಶ, ಆಡುಮಲ್ಲೇಶ್ವರ ಕಿರು ಮೃಗಾಲಯ ರಸ್ತೆಯಲ್ಲಿ ವಾಯುವಿಹಾರಿಗಳ ಸಂಖ್ಯೆ ಕುಸಿದಿದೆ. ಹೊರಗೆ ಬರುವ ಜನರು ಕೂಡ ಮೈಗೆ ಗಟ್ಟಿಯಾದ ಜರ್ಕಿನ್, ತಲೆಗೆ ಟೊಪ್ಪಿಗೆ ಧರಿಸಿ ಓಡಾಡುತ್ತಿದ್ದಾರೆ.

ಕೋಟೆನಾಡಿನ ಬಹುತೇಕ ನಗರ, ಪಟ್ಟಣ, ಹಳ್ಳಿಗಳು ಬೆಟ್ಟಗಳ ಸಾಲಿನಲ್ಲೇ ಇರುವ ಕಾರಣ ಮಂಜು ಮುಸುಕಿದ ವಾತಾವರಣ ತೀವ್ರಗೊಳ್ಳುತ್ತಿದೆ. ಬೆಟ್ಟಗಳ ನಡುವೆ ಸುಳಿದಾಡುವ ಮಂಜು (ವಿಲೋಮ ತಾಪಮಾನ) ಮಧ್ಯಾಹ್ನ, ಸಂಜೆವರೆಗೂ ಇರುವ ಕಾರಣ ಚಳಿಯೂ ಹೆಚ್ಚಾಗಿದೆ ಎಂದು ತಜ್ಞರು ಹೇಳುತ್ತಾರೆ. ಬೆಳಿಗ್ಗೆ 9 ಗಂಟೆಯಾದರೂ ಮಂಜು ಮುಸುಕಿದ ವಾತಾವರಣ ಮುಂದುವರಿದಿದ್ದು ಮಕ್ಕಳು ಶಾಲೆಗೆ ತೆರಳಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಥರಾವರಿ ಉಣ್ಣೆಯ ಬಟ್ಟೆಗಳು ಬಂದಿವೆ. ಬೀದಿ ಬೀದಿಯಲ್ಲಿ ಸ್ವೆಟರ್, ಟೋಪಿ ಮಾರಾಟ ಮಾಡುತ್ತಿದ್ದಾರೆ. ಟೋಪಿಗಳು ₹ 100ಕ್ಕೆ ದೊರೆಯುತ್ತಿದ್ದರೆ, ₹ 250ಕ್ಕೆ ಸ್ವೆಟರ್ಗಳು ದೊರೆಯುತ್ತಿವೆ. ಹೊರ ಜಿಲ್ಲೆ, ಹೊರರಾಜ್ಯಗಳ ವ್ಯಾಪಾರಿಗಳು ಮುಖ್ಯರಸ್ತೆ, ಸಣ್ಣಪುಟ್ಟ ರಸ್ತೆಗಳಲ್ಲೂ ಈ ಉಡುಪುಗಳನ್ನು ಮಾರಾಟ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಜನರು ಬೆಳ್ಳಂ ಬೆಳಿಗ್ಗೆ ಬೆಂಕಿ ಹಾಕಿ ಮೈಕಾಯಿಸಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ನಷ್ಟಿದ್ದರೆ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕನಿಷ್ಠ ಉಷ್ಣಾಂಶ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. 2008–09ರ ವೇಳೆ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಕಡಿಮೆ 8.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಅನಾರೋಗ್ಯ ಸಮಸ್ಯೆ: ತೀವ್ರ ಚಳಿಯಿಂದಾಗಿ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಶೀತ ಜ್ವರ, ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳು ಉಲ್ಬಣಗೊಂಡಿವೆ. ಶೀತದಿಂದ ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳುವುದು ಪಾಲಕರಿಗೆ ಸವಾಲಾಗಿದೆ. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ತಗ್ಗಿದೆ.

ಶೀತದಿಂದಾಗಿ ಕೆಲವು ಹಿರಿಯ ನಾಗರಿಕರಲ್ಲಿ ಶ್ವಾಸಕೋಶದ ಸಮಸ್ಯೆಗಳು ಉಲ್ಬಣಗೊಂಡಿವೆ. ಆಸ್ತಮಾದಿಂದ ಬಳಲುವವರಿಗೆ ಇದು ಅತ್ಯಂತ ಕೆಟ್ಟ ಕಾಲವಾಗಿದೆ. ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಲು ಅವರು ಪರದಾಡುತ್ತಿದ್ದಾರೆ. ಯುವಕರಿಗೂ ಕೀಲು ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡಿನೋವು, ಸೊಂಟನೋವು ಹೆಚ್ಚಾಗಿದೆ.

‘ಚಿತ್ರದುರ್ಗ ಜಿಲ್ಲೆ ಭಿನ್ನ ವಾತಾವರಣ ಹೊಂದಿದೆ. ಚಳಿಗಾಲದಲ್ಲಿ ಇಲ್ಲಿರಲು ಕಷ್ಟವಾಗುತ್ತದೆ, ಬೇಸಿಗೆ ಕಾಲ ಬಂದಾಗ ಅತೀ ಬಿಸಿಲು ಕಾಡುತ್ತದೆ. ಅಲರ್ಜಿ ಸಮಸ್ಯೆ ಹೊಂದಿದವರಿಗೆ ಒಂದೆರಡು ತಿಂಗಳು ಇಲ್ಲಿ ಬಹಳ ಕಷ್ಟವಾಗುತ್ತದೆ’ ಎಂದು ಜೆಸಿಆರ್ ನಿವಾಸಿಯೊಬ್ಬರು ತಿಳಿಸಿದರು.

ಹೃದಯದ ಕಾಳಜಿ ಮಾಡಿ... ‘

ಹೃದಯ ಸಮಸ್ಯೆಯುಳ್ಳವರು ಚಳಿಗಾಲದಲ್ಲಿ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದವರು ಪಡೆಯುತ್ತಿರುವ ರೋಗಿಗಳು ಶೀತಗಾಳಿಗೆ ಮೈತೆರೆದುಕೊಳ್ಳದಂತೆ ನೋಡಿಕೊಳ್ಳಬೇಕು. ಯಾವುದೇ ಸಮಸ್ಯೆ ಇಲ್ಲದವರು ಚಳಿಗೆ ಹೆದರಬೇಕಾಗಿಲ್ಲ’ ಎಂದು ಎಸ್ಜೆಎಂ–ಇಂಡಿಯಾನ ಹಾರ್ಟ್ ಸೆಂಟರ್ನ ಹೃದ್ರೋಗ ತಜ್ಞ ಡಾ.ಆರ್.ಎಸ್.ಕಾರ್ತೀಕ್ ಹೇಳಿದರು. ‘ಚಳಿಯಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ ಇದೇ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹಿರಿಯ ನಾಗರಿಕರು ಈ ಸಂದರ್ಭದಲ್ಲಿ ಬಿಸಿಲು ಬಂದ ನಂತರವಷ್ಟೇ ಹೊರಗೆ ಬಂದರೆ ಒಳ್ಳೆಯದು. ಹೊರಗೆ ಬಂದು ವ್ಯಾಯಾಮ ಮಾಡುವುದ ಬದಲು ಮನೆಯ ಒಳಾಂಗಣದಲ್ಲೇ ವ್ಯಾಯಾಮ ಮಾಡಿಕೊಂಡರೆ ಯಾವ ತೊಂದರೆಯೂ ಆಗುವುದಿಲ್ಲ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.