ಹಿರಿಯೂರು: ‘1962ರಲ್ಲಿ ಭಾರತ–ಚೀನಾ ನಡುವಿನ ರಜಾಂಗ್–ಲಾ ಕದನದಲ್ಲಿ ವೀರ ಮರಣವನ್ನಪ್ಪಿದ 120ಕ್ಕೂ ಹೆಚ್ಚು ಯಾದವರಿಗೆ ಗೌರವ ಸಮರ್ಪಣೆ ಹಾಗೂ ಭಾರತೀಯ ಸೈನ್ಯದಲ್ಲಿ ಪ್ರತ್ಯೇಕ ಮೀಸಲಾತಿ (ರೆಜಿಮೆಂಟ್)ಗೆ ಒತ್ತಾಯಿಸಿ ನ. 18 ರಂದು ದೆಹಲಿಯಲ್ಲಿ ಹಮ್ಮಿಕೊಂಡಿರುವ ಯಾದವ ಕಳಸ ಯಾತ್ರೆ’ ನಡೆಯಲಿದೆ’ ಎಂದು ಯಾದವ ಸಂಘದ ರಾಜ್ಯ ಘಟಕದ ಅಧ್ಯಕ್ಷರಾದ ವಿಧಾನಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಮನವಿ ಮಾಡಿದರು.

ಬಿಹಾರದ ಛಾಪ್ರಾದಿಂದ ಆರಂಭವಾಗಿರುವ ಯಾದವ ಕಳಸ ಯಾತ್ರೆ ಗುರುವಾರ ನಗರಕ್ಕೆ ಆಗಮಿಸಿದಾಗ ರಥವನ್ನು ಬರಮಾಡಿಕೊಂಡು ಅವರು ಮಾತನಾಡಿದರು.

‘ದೆಹಲಿ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾದವರು, ಶೋಷಿತ ಹಿಂದುಳಿದ ಸಮುದಾಯದವರು ಪಾಲ್ಗೊಳ್ಳಬೇಕು. ದೇಶದಲ್ಲಿ ವಿವಿಧ ಜಾತಿ ಸಮೀಕ್ಷೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಆರಂಭಿಸಿರುವ ಜಾತಿ ಸಮೀಕ್ಷೆಯಲ್ಲಿ ಯಾದವರು ತಪ್ಪದೇ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

‘ರಾಜ್ಯದಿಂದ ನ. 11ಕ್ಕೆ ತೆಲಂಗಾಣ ರಾಜ್ಯಕ್ಕೆ ಹೋಗಲಿದೆ. ನ. 18 ರಂದು ನವದೆಹಲಿಯ ರಾಮಲೀಲಾ ಅಥವಾ ಜಂತರ್ ಮಂಥರ್ನಲ್ಲಿ ಮೀಸಲಾತಿಗಾಗಿ ಪ್ರತಿಭಟಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಪ್ರಯುಕ್ತ ಈಗಲೇ ರೈಲಿಗೆ ಬುಕಿಂಗ್ ಮಾಡಿ. ಹೆಚ್ಚುವರಿ ಬೋಗಿ ಕೊಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ’ ಎಂದು ಶ್ರೀನಿವಾಸ್ ತಿಳಿಸಿದರು.

ಗುರುವಾರ ಬೆಳಿಗ್ಗೆ ತಾಲ್ಲೂಕಿನ ಜವನಗೊಂಡನಹಳ್ಳಿಯ ಶ್ರೀಕೃಷ್ಣ ದೇವಸ್ಥಾನಕ್ಕೆ ಕಳಸ ಯಾತ್ರೆ ಬಂದಿತ್ತು. ಮಧ್ಯಾಹ್ನ 3 ಗಂಟೆಗೆ ನಗರಕ್ಕೆ ಆಗಮಿಸಿತು. ರಂಜಿತ್ ಹೋಟೆಲ್ ವೃತ್ತದಿಂದ ವೇದಾವತಿ ಬಡಾವಣೆಯಲ್ಲಿರುವ ಶ್ರೀಕೃಷ್ಣ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಅಭಿನಂದನ್, ತಾಲ್ಲೂಕು ಗೊಲ್ಲ ಯಾದವ ಸಮಾಜದ ಅಧ್ಯಕ್ಷ ಆರ್. ರಂಗಸ್ವಾಮಿ, ಮುಖಂಡರಾದ ಬಿ.ಕೆ. ಕರಿಯಪ್ಪ, ವಿ. ಶಿವಣ್ಣ, ಸಿ.ಬಿ. ಪಾಪಣ್ಣ, ಅಖಿಲ ಭಾರತ ಯಾದವ ಮಹಾಸಭಾದ ಕಿರಣ್ ಕುಮಾರ್ ಯಾದವ್, ಡಾಬಾ ಚಿಕ್ಕಣ್ಣ, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಣ್ಣಪ್ಪ, ಮಮತಾ, ಸರವಣ, ಕೃಷ್ಣಮೂರ್ತಿ, ಕೇಶವ್, ಮಹೇಶ್, ಗಾಯಿತ್ರಮ್ಮ, ಶಕುಂತಲಾ, ಆರ್. ಪಾಂಡುರಂಗ, ನಿತ್ಯಾನಂದ ಯಾದವ್, ರಾಮಕೃಷ್ಣ, ಎಚ್. ತಿಪ್ಪೇಸ್ವಾಮಿ, ಪುಟ್ಟಪ್ಪ, ಗೋವಿಂದರಾಜು, ರಾಘವೇಂದ್ರ, ನಿರಂಜನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.