ಚಿತ್ರದುರ್ಗ: ರಂಗಾಸಕ್ತರು, ರಂಗಕಾರ್ಮಿಕರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಕೊನೆಗೂ ತರಾಸು ರಂಗಮಂದಿರದ ಬಾಡಿಗೆ ದರಗಳನ್ನು ಪರಿಷ್ಕರಿಸಿದೆ. ಇತ್ತೀಚೆಗೆ ನಡೆದ ಜಿಲ್ಲಾ ರಂಗಮಂದಿರ ಸಮಿತಿ ಸಭೆಯಲ್ಲಿ ದರಗಳನ್ನು ಅರ್ಧದಷ್ಟು ಕಡಿತಗೊಳಿಸಿ, ಪುನರ್‌ನಿಗದಿ ಮಾಡಲಾಗಿದೆ. ಈ ಮೊದಲು ಎಲ್ಲ ಕಾರ್ಯಕ್ರಮಗಳಿಗೆ ಅರ್ಧ ದಿನಕ್ಕೆ ್ಙ 4 ಸಾವಿರ ಹಾಗೂ ಪೂರ್ಣ ದಿನಕ್ಕೆ ್ಙ 7 ಸಾವಿರ ನಿಗದಿಪಡಿಸಲಾಗಿತ್ತು. ಈ ದರಗಳ ಬಗ್ಗೆ ರಂಗಕರ್ಮಿಗಳು ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿ ಪುನರ್‌ಪರಿಶೀಲಿಸುವ ಬಗ್ಗೆ ಕೋರಿದ್ದರು.

ಈಗ ಸಮಿತಿ ಇತರ ಜಿಲ್ಲೆಗಳಲ್ಲಿರುವಂತೆ ದರಗಳನ್ನು ನಿಗದಿಪಡಿಸಿದೆ. ಸಂಗೀತ, ನೃತ್ಯ, ಸಾಹಿತ್ಯಿಕ ಮತ್ತು ನಾಟಕ ಕಾರ್ಯಕ್ರಮಗಳಿಗೆ ಅರ್ಧ ದಿನಕ್ಕೆ ಬಾಡಿಗೆ 2 ಸಾವಿರ ರೂ ಹಾಗೂ ಪೂರ್ಣ ದಿನಕ್ಕೆ 3 ಸಾವಿರ ರೂ ಬಾಡಿಗೆ ನಿಗದಿಪಡಿಸಲಾಗಿದೆ. ಈ ಕಾರ್ಯಕ್ರಮಗಳನ್ನು ಹೊರತುಪಡಿಸಿದ ಇತರೆ ಕಾರ್ಯಕ್ರಮಗಳಿಗೆ ಅರ್ಧ ದಿನಕ್ಕೆ ಬಾಡಿಗೆ 4 ಸಾವಿರ ರೂ. ಹಾಗೂ ಪೂರ್ಣ ದಿನಕ್ಕೆ ಬಾಡಿಗೆ 7 ಸಾವಿರ ರೂ ಬಾಡಿಗೆ ನಿಗದಿಪಡಿಸಲಾಗಿದೆ. ಟಿಕೆಟ್ ಪ್ರವೇಶವಿರುವ ಕಾರ್ಯಕ್ರಮಗಳಿಗೆ ಅರ್ಧ ದಿನಕ್ಕೆ ್ಙ 5,800 ಹಾಗೂ ಪೂರ್ಣ ದಿನಕ್ಕೆ ್ಙ 8800 ಬಾಡಿಗೆ ನಿಗದಿಪಡಿಸಲಾಗಿದೆ. ಈ ಬಾಡಿಗೆ ದರಗಳು 2011ರ ಜನವರಿ 1ರಿಂದ ಅನ್ವಯವಾಗುವಂತೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.

ರಂಗಮಂದಿರದ ನವೀಕರಣಕ್ಕೂ ಯೋಜನೆ ರೂಪಿಸಲಾಗಿದೆ. ಒಟ್ಟು ್ಙ 28.5 ಲಕ್ಷ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಂಗಮಂದಿರದಲ್ಲಿನ ಕುರ್ಚಿಗಳನ್ನು ತೆಗೆದು ಹೊಸ ಕುರ್ಚಿಗಳನ್ನು ಅಳವಡಿಸಲಾಗುವುದು. ಜತೆಗೆ ಪರದೆಗಳನ್ನು ಸಹ ಬದಲಾಯಿಸಲಾಗುವುದು. ರಂಗಮಂದಿರ ಮುಂದೆ ಉದ್ಯಾನ ಹಾಗೂ ಆವರಣದಲ್ಲಿ ಸಾಹಿತಿಗಳು ಹಾಗೂ ಕಲಾಪ್ರಕಾರಗಳ ಛಾಯಾಚಿತ್ರಗಳನ್ನು ಹಾಕಲು ಯೋಜನೆ ರೂಪಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ. ನೀಲಮ್ಮ ತಿಳಿಸಿದ್ದಾರೆ.

ಸ್ವಾಗತಾರ್ಹ
ರಂಗಮಂದಿರದ ದರಗಳನ್ನು ಕಡಿತಗೊಳಿಸಿರುವುದು ಸ್ವಾಗತಾರ್ಹ. ಈ ಬಗ್ಗೆ ಹಲವು ದಿನಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ ಎಂದು ನಾಟಕ ಅಕಾಡೆಮಿ ಸದಸ್ಯ ಕೆ. ನಾಗರಾಜ್ ತಿಳಿಸಿದ್ದಾರೆ.

ವೃತ್ತಿ ಅಥವಾ ಹವ್ಯಾಸಿ ರಂಗಭೂಮಿ ಚಟುವಟಿಕೆಗಳಿಗೆ ್ಙ 1500 ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದೆ. ಕೊನೆಗೆ ್ಙ 2 ಸಾವಿರ ನಿಗದಿಪಡಿಸಲಾಗಿದೆ. ಕಲಾವಿದರಿಗೆ ಆಗಿರುವ ತೊಂದರೆಯನ್ನು ಜಿಲ್ಲಾಧಿಕಾರಿಗೆ ವಿವರವಾಗಿ ತಿಳಿಸಿದ್ದೆ. ಕಲಾವಿದರಿಗೆ ಆಗುತ್ತಿರುವ ಅನ್ಯಾಯವನ್ನು ಜಿಲ್ಲಾಧಿಕಾರಿಗಳು ಸಹಾನುಭೂತಿಯಿಂದ ಪರಿಶೀಲಿಸಿ ಈ ತಿರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಾದರೂ ಮತ್ತಷ್ಟು ದರ ಕಡಿಮೆ ಮಾಡಲಿ ಎನ್ನುವುದು ನಮ್ಮ ಆಶಾಭಾವನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.