ಬುಧವಾರ, ಮಾರ್ಚ್ 3, 2021
19 °C

ಪ್ರಯಾಣಿಕರ ಹಸಿವು ನೀಗಿಸಿದ ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಊಟವಿಲ್ಲದೇ ಪರದಾಡುತ್ತಿದ್ದ ಪ್ರಾಯಾಣಿಕರಿಗೆ ಕಾಂಗ್ರೆಸ್‌ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಊಟದ ವ್ಯವಸ್ಥೆ ಮಾಡುವ ಜತೆಗೆ, ದೂರದ ಪ್ರಯಾಣಕ್ಕೆ ಅಗತ್ಯ ವಾಹನದ ವ್ಯವಸ್ಥೆ ಕಲ್ಪಿಸಲಾಯಿತು.

ಬೇರೆಬೇರೆ ಭಾಗಗಳಿಂದ ಬಂದಿದ್ದ, ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಊಟ ಸಿಗದೇ ಬಳಲಿದ್ದರು. ವಿಷಯ ತಿಳಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್, ಕಾರ್ಯದರ್ಶಿ ರಂಗಸ್ವಾಮಿ, ಚಂದ್ರಶೇಖರ್, ಜಗತ್, ಲಕ್ಷ್ಮಣಪ್ಪ, ಸ್ಟೆಲ್ಲಾ ಮಾರ್ಟಿನ್, ಕುಮಾರಸ್ವಾಮಿ, ಅರ್ಚನಾ, ಮಂಜುನಾಥ ಗೌಡ, ಸೌಗಂಧಿಕಾ ಮತ್ತಿತರರು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜತೆ ಮಾತನಾಡಿ, ಎಲ್ಲ ಪ್ರಯಾಣಿಕರಿಗೂ ಊಟದ ವ್ಯವಸ್ಥೆ ಮಾಡಿದರು.

ಮೊದಲು ನಿಲ್ದಾಣದ ಒಳಗೆ ಇದ್ದ ಎಲ್ಲರಿಗೂ ಕೂರಿಸಿ, ಆಹಾರ ನೀಡಿದರು. ಜನರು ಅಂತರಕಾಪಾಡಿಕೊಂಡು ಸಾಲಾಗಿ ಕುಳಿತು ಊಟ ಮಾಡಿದರು. ನಂತರ ಬಸ್‌ ಇಳಿದ ಎಲ್ಲ ಪ್ರಯಾಣಿಕರಿಗೂ ಆಹಾರದ ಪೊಟ್ಟಣ ನೀಡಲಾಯಿತು.

ಜಿಲ್ಲೆಯ ಒಳ ಪ್ರದೇಶಗಳಿಗೆ ತೆರಳಲು ವಾಹನವಿಲ್ಲದೇ ಪರದಾಡುತ್ತಿದ್ದ ಹಲವರಿಗೆ ವಾಹನದ ವ್ಯವಸ್ಥೆ ಕಲ್ಪಿಸಲಾಯಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು