ಸೋಮವಾರ, ಫೆಬ್ರವರಿ 17, 2020
16 °C

ಬಿಜೆಪಿ ಮುಖಂಡನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ನಾಗರಾಜ್ (50) ಅವರನ್ನು ಭಾನುವಾರ ತಡರಾತ್ರಿ ಕೊಲೆ ಮಾಡಲಾಗಿದೆ.

ಕೊಲೆ ಪ್ರಕರಣ ಬೆಳಕಿಗೆ ಬಂದ ಕೆಲವೇ ತಾಸುಗಳಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿಗಳೆಂದು ಶಂಕಿಸಲಾದ ಭದ್ರಾವತಿ ಜೇಡಿಕಟ್ಟೆಯ ರಾಘು, ರಾಘವೇಂದ್ರ ಅವರನ್ನು ವಶಕ್ಕೆ ಪಡೆದಿದ್ದಾರೆ. 

ನಾಗರಾಜ ರಾಗಿಗುಡ್ಡ ನಿವಾಸಿ. ರಾತ್ರಿ 8.30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರನ್ನು ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ರಾಗಿಗುಡ್ಡ ಸಮೀಪದ ಕುವೆಂಪು ಬಡಾವಣೆಯಲ್ಲಿ ಶವ ದೊರೆತ್ತಿತ್ತು. ಆತನ ಬಳಿ ಇದ್ದ ಬೈಕ್‌, ಮೊಬೈಲ್‌ನಿಂದ ಶವದ ಗುರುತು ಪತ್ತೆಯಾಗಿತ್ತು. 

ಶಂಕಿತ ಆರೋಪಿಗಳು ಹಾಗೂ ಕೊಲೆಯಾದ ನಾಗರಾಜ್ ಮಧ್ಯೆ ಹಣಕಾಸಿನ ವ್ಯವಹಾರವಿದ್ದು, ಇದು ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು