ಮೂಡುಬಿದಿರೆ (ದಕ್ಷಿಣ ಕನ್ನಡ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ ಅಳ್ವಾಸ್ ವಿರಾಸತ್ಗೆ ಸಂಬಂಧಿಸಿ ‘ಆಳ್ವಾಸ್ ವಿರಾಸತ್ ಶಾಸ್ತ್ರೀಯ ಯುವಸಂಪದ’ ಶಿಬಿರ ಡಿ.10ರಿಂದ 14ರವರೆಗೆ ಬೆಳಿಗ್ಗೆ 7.30ರಿಂದ ಸಂಜೆ 5ರವರೆಗೆ ನಡೆಯಲಿದೆ.

ಆಸಕ್ತ ಶಾಸ್ತ್ರೀಯ (ಹಿಂದೂಸ್ಥಾನಿ- ಕರ್ನಾಟಕ) ಸಂಗೀತ- ನೃತ್ಯ- ತಾಳವಾದ್ಯ ಮತ್ತು ಯಕ್ಷಗಾನ ಕಲೆ ಅಭ್ಯಸಿಸುವ 6ನೇ ತರಗತಿಯಿಂದ ಸ್ನಾತಕೋತ್ತರ ತರಗತಿವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಭ್ಯಸಿಸುವ ಕಲಾಪ್ರಕಾರದಲ್ಲಿ ಕನಿಷ್ಠ 2 ವರ್ಷಗಳ ಪರಿಶ್ರಮವಿರಬೇಕು. ತರಬೇತಿ ಶುಲ್ಕ ಇರುವುದಿಲ್ಲ.

ಊಟ, ಉಪಾಹಾರ ಮತ್ತು ವಸತಿ ಉಚಿತವಾಗಿರುತ್ತವೆ. ಶಿಬಿರದಲ್ಲಿ ಯೋಗ, ಧ್ಯಾನ, ವಿದ್ವಾಂಸರಿಂದ ಉಪನ್ಯಾಸ, ಶಾಸ್ತ್ರೀಯ ಸಂಗೀತ-ನೃತ್ಯಾದಿ ಕಲೆಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಪ್ರಾತ್ಯಕ್ಷಿಕೆಗಳಿರುತ್ತವೆ. ಕೃಷಿ, ಆಹಾರ, ಚಿತ್ರಕಲೆ, ಕರಕುಶಲ, ಫಲಪುಷ್ಪ ಪ್ರದರ್ಶನ ಮತ್ತು ‘ಆಳ್ವಾಸ್ ವಿರಾಸತ್-2024’ರ ಮಹಾವೈಭವದಲ್ಲಿ ಭಾಗವಹಿಸಬಹುದು. ಆಸಕ್ತರು ಡಿ.9ರ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗಾಗಿ ಚಂದ್ರಶೇಖರ ನಾವಡ ಮೊ: 9972247873 ಅಥವಾ ಸುಮನಾ ಪ್ರಸಾದ್ ಮೊ: 9448989382 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.