ದೂರುಗಳು ಬಂದರೆ ಪರಿಶೀಲನೆ ನಡೆಸಿಯೇ ನಡೆಸುತ್ತೇವೆ. ಅದಲ್ಲದೆ ಸ್ವಯಂ ಪ್ರೇರಿತರಾಗಿ ಪರಿಶೀಲನೆ ಮಾಡುವ ವ್ಯವಸ್ಥೆಯೂ ಮಂಡಳಿಯಲ್ಲಿದೆ. ಅದು ನಿತ್ಯ ನಿರಂತರ ಎಂಬಂತೆ ನಡೆಯುತ್ತದೆ.
ಲಕ್ಷ್ಮಿಕಾಂತ್ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ
‘ಪರಿಶೀಲನೆ ನಡೆಸಲಾಗುವುದು’
ಕೈಗಾರಿಕಾ ಪ್ರದೇಶದ ಈ ಕಟ್ಟಡದಲ್ಲಿ ಕೋಳಿ ಆಹಾರ ತಯಾರಿ ಫ್ಯಾಕ್ಟರಿ ಸ್ಥಾಪಿಸಲು ಅನುಮತಿ ಪಡೆಯಲಾಗಿದೆ. ಅದರ ಅವಧಿ 2032ನೇ ಸೆಪ್ಟೆಂಬರ್ 30ರ ವರೆಗೆ ಇದೆ. ಅನುಮತಿ ಪತ್ರದಲ್ಲಿ ಸ್ಪಷ್ಟವಾದ ನಿರ್ದೇಶನಗಳು ಇವೆ. ಅದನ್ನು ಪಾಲಿಸದೇ ಇದ್ದರೆ ಕ್ರಮ ಕೈಗೊಳ್ಳಲು ಇಲಾಖೆಗೆ ಅಧಿಕಾರವಿದೆ. ಉದ್ದಿಮೆಯಿಂದ ಪರಿಸರಕ್ಕೆ ಅಥವಾ ಆರೋಗ್ಯಕ್ಕೆ ಹಾನಿಯಾಗುವ ಅಂಶಗಳು ಇವೆ ಎಂದು ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಲಕ್ಷ್ಮಿಕಾಂತ್ ತಿಳಿಸಿದರು.