ಉಳ್ಳಾಲ: ‘ಎಲ್ಲಾ ಜಾತಿ, ಮತದವರು ಭಿನ್ನಾಭಿಪ್ರಾಯ ಬದಿಗಿರಿಸಿ ಪರಸ್ಪರ ಸಹೋದರತೆಯಿಂದ ಬದುಕಿದರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ’ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ತೊಕ್ಕೊಟ್ಟು ಕಾಪಿಕಾಡುವಿನ ಉಮಾಪುರಿಯ ಶ್ರೀಉಮಾಮಹೇಶ್ವರಿ ದೇವಸ್ಥಾನದಲ್ಲಿ ಮುಂದಿನ ವರ್ಷ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಕ್ಷೇತ್ರದ ಆವರಣದಲ್ಲಿ ಪ್ರತಿಷ್ಠಾಪಿಸಲಿರುವ ಶ್ರೀ ಭದ್ರಕಾಳಿ ದೇವಿಯ ನೂತನ ಪೀಠಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಉಮಾಮಹೇಶ್ವರಿ ಕ್ಷೇತ್ರಕ್ಕೆ ಬಂದಷ್ಟು ಶಕ್ತಿ ಇಮ್ಮಡಿಯಾಗಿದೆಯೇ ಹೊರತು ಎಂದಿಗೂ ಕುಗ್ಗಿಲ್ಲ. ಕಾಪಿಕಾಡುವಿನಲ್ಲಿ ಉಮಾಮಹೇಶ್ವರಿ ಕ್ಷೇತ್ರದ ನಿರ್ಮಾಣದ ನಂತರ ಈ ಪ್ರದೇಶದಲ್ಲಿ ಸುಸಜ್ಜಿತ ಕಾಂಕ್ರಿಟ್ ರಸ್ತೆ ಸೇರಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಜಿಲ್ಲೆಯಲ್ಲಿ ನಾರೀ ಶಕ್ತಿಯು ಅತ್ಯಂತ ಪ್ರಬಲವಾಗಿದೆ. ಎಲ್ಲರೂ ಒಟ್ಟು ಸೇರಿ ಕೆಲಸ ಮಾಡಿದಾಗ ಕ್ಷೇತ್ರಕ್ಕೂ ವಿಭಿನ್ನ ಶಕ್ತಿ ಬರುತ್ತದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಾ ಸಹಕಾರ ನೀಡಲು ಸಿದ್ಧ ಎಂದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಉಮಾಮಹೇಶ್ವರಿ ಸೇವಾ ಸಮಿತಿಯ ಗಣೇಶ್ ಕಾಪಿಕಾಡು ನಿರೂಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಕೆ.ರವಿಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ತೊಕ್ಕೊಟ್ಟು ಸಹ್ಯಾದ್ರಿ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಟಿ.ಸುವರ್ಣ, ನಿರ್ದೇಶಕ ಸತೀಶ್ ಕರ್ಕೇರ, ಬಾಬು ಕಿನ್ಯ, ಚಂದ್ರಹಾಸ್ ಅಡ್ಯಂತಾಯ, ಕೃಷ್ಣ ಶಿವಕೃಪ, ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ ಸುವರ್ಣ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು, ಉಮಾಮಹೇಶ್ವರಿ ಕ್ಷೇತ್ರದ ಮೊಕ್ತೇಸರ ದಿನೇಶ್ ಕೆ.ಅತ್ತಾವರ, ಈಶ್ವರ್ ಉಳ್ಳಾಲ್, ಟಿ.ರಘುರಾಮ್ ಶೆಟ್ಟಿ, ನಿರ್ಮಲ ಕುಂಞಾಬು, ಮಹಾಲಿಂಗ, ಡಾ.ರಾಮಕೃಷ್ಣ ಶೆಟ್ಟಿ, ಕೂಸಪ್ಪ ಗಟ್ಟಿ, ಉಮಾಮಹೇಶ್ವರಿ ಸೇವಾ ಸಮಿತಿ ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ, ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು, ಉಪಾಧ್ಯಕ್ಷ ದಮಯಂತಿ ಪುರುಷೋತ್ತಮ್ ಕಾಪಿಕಾಡು, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಭಟ್ನಗರ, ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯ ಸಂಯೋಜಕ ಗೋಪಿನಾಥ್ ಕಾಪಿಕಾಡು, ಸೋಮೇಶ್ವರ ಪುರಸಭಾ ಸದಸ್ಯರಾದ ದೀಪಕ್ ಪಿಲಾರು, ಪುರುಷೋತ್ತಮ ಶೆಟ್ಟಿ ಪಿಲಾರು, ಉದ್ಯಮಿ ಸತೀಶ್ ಕರ್ಕೇರ, ಭಗತ್ ಸಿಂಗ್ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.