ಕಾಸರಗೋಡು: ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಚಿತ್ತಾರಿ ಗ್ರಾಮಾಧಿಕಾರಿ, ಕೊಡಕ್ಕಾಡ್ ವೆಳ್ಳಚ್ಚಾಲ್ ನಿವಾಸಿ ಸಿ.ಅರುಣ್ (40) ಮತ್ತು ಸಹಾಯಕ ಗ್ರಾಮಾಧಿಕಾರಿ, ಪಿಲಿಕೋಡ್ ವರಕ್ಕಾಡ್ ವಯಲ್ ನಿವಾಸಿ ಕೆ.ವಿ.ಸುಧಾಕರನ್ (52) ಎಂಬವರನ್ನು ಜಾಗೃತ ದಳ ಬಂಧಿಸಿದೆ.
ಜಾಗೃತ ದಳದ ಡಿವೈಎಸ್‌ಪಿ ವಿ.ಕೆ.ವಿಶ್ವಂಭರನ್ ನೇತೃತ್ವದ ತಂಡ ಶುಕ್ರವಾರ ಚಿತ್ತಾರಿ ಗ್ರಾಮಕಚೇರಿಗೆ ದಾಳಿ ನಡೆಸಿತ್ತು. ಚಾಮುಂಡಿಕುನ್ನು ರಸ್ತೆಯ ಕಾಟಿಲಂಗಾಡ್ ಎಂಬಲ್ಲಿನ ಜಾಗವೊಂದಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅರ್ಜಿ ಸ್ವೀಕಾರಕ್ಕೆ ಲಂಚ ನೀಡುವಂತೆ ಆರೊಪಿಗಳು ಅರ್ಜಿದಾರರೊಬ್ಬರಲ್ಲಿ ಕೇಳಿದ್ದರು. ಗ್ರಾಮಾಧಿಕಾರಿಗೆ ₹ 2 ಸಾವಿರ, ಸಹಾಯಕ ಗ್ರಾಮಾಧಿಕಾರಿ ₹ 1 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.