ಉಳ್ಳಾಲ: ಅಂಬ್ಲಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಜ.26ರಂದು ಶಾಲಾ ಶತಮಾನೋತ್ಸವ, ಸ್ಮಾರಕ ಭವನ ಶಿಲಾನ್ಯಾಸ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವಾಹನದ ಕೀಲಿ ಕೈ ಹಸ್ತಾಂತರ ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಫೀಕ್ ಅಂಬ್ಲಮೊಗರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲ ತಾಲ್ಲೂಕು ವ್ಯಾಪ್ತಿಯಲ್ಲಿ ಶತಮಾನ ಪೂರೈಸಿದ ಪ್ರಥಮ ಸರ್ಕಾರಿ ಪ್ರಾಥಮಿಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶತಮಾನೋತ್ಸವ ಸ್ಮಾರಕ ಭವನಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಲಾನ್ಯಾಸ ನೆರವೇರಿಸುವರು. ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಸ್ಮರಣ ಸಂಚಿಕೆ ‘ಅಂಬಲಿ’ ಬಿಡುಗಡೆ ಮಾಡುವರು. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸುವರು ಎಂದರು.

ಬೆಳಿಗ್ಗೆ 9.30ಕ್ಕೆ ಅಂಬ್ಲಮೊಗರು ಗ್ರಾ.ಪಂ.ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ಧ್ವಜಾರೋಹಣ ನಡೆಸಲಿದ್ದು, ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ ಗುರುವಂದನೆಯನ್ನು ಯು.ಟಿ.ಖಾದರ್ ನಡೆಸುವರು. ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಪಡ್ಯಾರುಮನೆ ವಹಿಸಲಿದ್ದಾರೆ. ಪ್ರತಿಭಾ ಪುರಸ್ಕಾರವನ್ನು ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಫೀಕ್ ಅಂಬ್ಲಮೊಗರು, ಶಾಲಾ ಹಸ್ತ ಪ್ರತಿ ಬಿಡುಗಡೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬುಸಾಲಿ, ದೀಪ ಪ್ರಜ್ವಲನೆಯನ್ನು ಶತಮಾನೋತ್ಸವ ಸಮಿತಿ ಗೌರವ ಮಾರ್ಗದರ್ಶಕ ಸುದರ್ಶನ್ ಶೆಟ್ಟಿ ಪರಿಯಾಲಗುತ್ತು ನೆರವೇರಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಭಾಗವಹಿಉಸುವರು. ಬೆಳಿಗ್ಗೆ 11ರಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕಲ್ಲಡ್ಕ ವಿಠಲ್ ನಾಯಕ್ ಮತ್ತು ತಂಡದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಲಿದೆ.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಎಸ್.ಎಲ್.ಭೋಜೇಗೌಡ ಭಾಗವಹಿಸಲಿದ್ದಾರೆ ಎಂದರು.

ಸಾಧಕರಾದ ಒಲಿಂಪಿಯಾ, ವಿಶ್ವಕಪ್ ನ್ಯಾಚುರಲ್ ಬಾಡಿಬಿಲ್ಡರ್ ಪದಕ ವಿಜೇತ ಶೋಧನ್ ರೈ ಪಟ್ನಮೊಗರು ಗುತ್ತು, ರಾಷ್ಟ್ರೀಯ ಪವರ್ ಲಿಫ್ಟಿಂಗ್ ಹಾಗೂ ಕರಾಟೆ ಪದಕ ವಿಜೇತ ರಿಕ್ತಕಿರಣ್ ಎಲಿಯಾರ್ ಪದವು ಅವರನ್ನು ಸನ್ಮಾನಿಸಲಾಗುವುದು. ಶತಮಾನೋತ್ಸವ ಸಮಿತಿ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವಾಹನ ಕೊಡುಗೆಯಾಗಿ ನೀಡಲಿದ್ದು, ಇದರ ಕೀಲಿಕೈ ಹಸ್ತಾಂತರವನ್ನು ಯು.ಟಿ ಖಾದರ್ ನಡೆಸಲಿದ್ದಾರೆ. ಸಂಜೆ 6ರಿಂದ ಶಾಲಾ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ರಸಮಂಜರಿ, 9ರಿಂದ ಕಿಶೋರ್ ಡಿ.ಶೆಟ್ಟಿ ನಿರ್ದೇಶನದ ಒರಿಯಾಂಡಲ ಸರಿ ಬೋಡು ತುಳು ನಾಟಕ ನಡೆಯಲಿದೆ ಎಂದರು.

ಶತಮಾನೋತ್ಸವ ಸಮಿತಿ ಗೌರವ ಉಪಾಧ್ಯಕ್ಷ ಎಸ್.ಮಹಮ್ಮದ್ ಇಕ್ಬಾಲ್, ಗೌರವ ಮಾರ್ಗದರ್ಶಕ ಸುದರ್ಶನ್ ಶೆಟ್ಟಿ ಪರಿಯಾಲಗುತ್ತು, ಪ್ರಧಾನ ಕಾರ್ಯದರ್ಶಿ ಜಗದೀಶ ಶೆಟ್ಟಿ ಎ., ಉಪಾಧ್ಯಕ್ಷ ಇಸಾಕ್ ಹಸನ್, ಕೋಶಾಧಿಕಾರಿ ಅಬುಸಾಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.