ಪುತ್ತೂರು: ಮನೆಯ ಅಂಗಳದಲ್ಲಿದ್ದ ತಾವರೆ ಬೆಳೆಸಿದ್ದ ನೀರಿನ ತೊಟ್ಟಿಗೆ ಬಿದ್ದು ಒಂದು ವರ್ಷ ಎರಡು ತಿಂಗಳ ಗಂಡು ಮಗುವೊಂದು ಮೃತಪಟ್ಟ ಘಟನೆ ನಗರದ ಹೊರವಲಯದ ಬನ್ನೂರು ಗ್ರಾಮದ ನೀರ್ಪಾಜೆ ಎಂಬಲ್ಲಿ ನಡೆದಿದೆ.

ಬನ್ನೂರು ಗ್ರಾಮದ ನೀರ್ಪಾಜೆ ನಿವಾಸಿ ಪ್ರಶಾಂತ್ ಗೌಡ ಮತ್ತು ರಂಜನಿ ದಂಪತಿಯ ಪುತ್ರ ಸ್ವರತ್ ಮೃತಪಟ್ಟ ಮಗು.

ಶನಿವಾರ ಮಧ್ಯಾಹ್ನ ತಮ್ಮ ಮನೆಯಂಗಳದಲ್ಲಿ ಮಗುವಿಗೆ ಊಟ ಮಾಡಿಸುತ್ತಿದ್ದ ತಾಯಿ ಮಗುವನ್ನು ಮನೆಯಂಗಳದಲ್ಲಿ ಬಿಟ್ಟು ಮನೆಯೊಳಗೆ ಹೋಗಿ ಬರುವ ವೇಳೆಗೆ ಮಗು ನಾಪತ್ತೆಯಾಗಿತ್ತು. ಹುಡುಕಾಡಿದಾಗ ತಾವರೆ ಬೆಳೆಸಿದ್ದ ನೀರಿನ ತೊಟ್ಟಿಯಲ್ಲಿ ಮಗು ಕಂಡು ಬಂದಿದೆ. ಕೂಡಲೇ ಮಗುವನ್ನು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದರೂ ಆ ವೇಳೆಗಾಗಲೇ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.