ಮಂಗಳವಾರ, ಮಾರ್ಚ್ 2, 2021
21 °C

ಮಕ್ಕಳ ನಾಟಕ ರಂಗ ಪರಿಕರ ಕಾರ್ಯಾಗಾರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಬೈಕಂಪಾಡಿ ವಿದ್ಯಾರ್ಥಿ ಸಂಘದ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಮಕ್ಕಳ ನಾಟಕದ ರಂಗ ಪರಿಕರ ಕಾರ್ಯಾಗಾರವನ್ನು ರೋಟರಿ ಮಂಗಳೂರು ಪೂರ್ವದ ಅಧ್ಯಕ್ಷ ಎನ್.ವಿನೋದ್ ಕುಡ್ವ ಭಾನುವಾರ ಉದ್ಘಾಟಿಸಿದರು.

‘ಮಕ್ಕಳನ್ನು ಸೃಜನಶೀಲರನ್ನಾಗಿ ಮಾಡಲು ರಂಗಭೂಮಿ ಚಟುವಟಿಕೆಗಳು ಅಗತ್ಯವಾಗಿವೆ. ಮಕ್ಕಳ ರಂಗಭೂಮಿಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ನಾಟಕಗಳು ಮಕ್ಕಳ ಮನಸಿನಲ್ಲಿವ ಹೊಸ ಚಿಂತನೆಗಳನ್ನು ಹುಟ್ಟುಹಾಕುತ್ತವೆ. ಮಕ್ಕಳ ರಂಗಭೂಮಿ ಇನ್ನಷ್ಟು ಬೆಳೆಯಬೇಕು’ ಎಂದು ಶುಭ ಹಾರೈಸಿದರು.

ರಂಗನಟಿ, ಸಂಘಟಕಿ ಆರತಿ ಆಳ್ವ ಬಜಾಲ್, ರಂಗಸಂಗಾತಿಯ ಸಂಚಾಲಕ ಕರುಣಾಕರ ಶೆಟ್ಟಿ, ಶಿಕ್ಷಕ ಪ್ರೇಮನಾಥ ಮರ್ಣೆ, ಕಾರ್ಯಾಗಾರದ ನಿರ್ದೇಶಕ ಮೈಮ್ ರಾಮ್‌ದಾಸ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು