ಶನಿವಾರ, ಮಾರ್ಚ್ 25, 2023
25 °C
ಭಾವನಾತ್ಮಕ ವಿಷಯ ಮುಂದಿಟ್ಟು ಜನರಿಗೆ ಮೋಸ: ರಮಾನಾಥ ರೈ ಆರೋಪ

ಬೆಲೆ ಏರಿಕೆ ವಿರುದ್ಧ ಸೈಕಲ್ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಪ್ಪಿನಂಗಡಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹಾಗೂ ಅಡುಗೆ ಅನಿಲ ಸಿಲಿಂಡರ್‌ ಸಹಾಯಧನ ರದ್ದತಿಯನ್ನು ವಿರೋಧಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಉಪ್ಪಿನಂಗಡಿಯಲ್ಲಿ ಸೈಕಲ್ ಜಾಥಾ, ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆ ನಡೆಯಿತು.

ಮಾಜಿ ಸಚಿವ ಬಿ. ರಮಾನಾಥ ರೈ ಸೈಕಲ್ ಜಾಥಾ ಮತ್ತು ಪಾದಯಾತ್ರೆಗೆ ಚಾಲನೆ ನೀಡಿದರು. ‘ಬಿಜೆಪಿಯವರು ಭಾವನಾತ್ಮಕ ವಿಚಾರ ಮುಂದಿಟ್ಟು ಜನರಿಗೆ ಮೋಸ ಮಾಡುತ್ತಿದ್ದಾರೆ. ಪ್ರಜ್ಞಾವಂತ ನಾಗರಿಕರಾದ ನಾವು ನಮಗೆ ಎದುರಾಗಿರುವ ಸಮಸ್ಯೆ ತಿಳಿದುಕೊಂಡರೆ ಬಿಜೆಪಿ ಸರ್ಕಾರದ ವೈಫಲ್ಯ ಅರ್ಥವಾಗುತ್ತದೆ’ ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ‘ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವುದರ ಜೊತೆಗೆ ಅಡುಗೆ ಅನಿಲಕ್ಕೆ ಇದ್ದ ಸಹಾಯಧನವನ್ನೂ ರದ್ದು ಮಾಡಲಾಗಿದೆ. ದೇಶದಾದ್ಯಂತ ವಿಮಾನ ನಿಲ್ದಾಣ ಸೇರಿದಂತೆ ದೇಶದ ಸಂಪತ್ತನ್ನು ಮಾರಾಟ ಮಾಡಿದ್ದಾರೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳದಿದ್ದರೆ ಬಿಜೆಪಿಯವರು ದೇಶವನ್ನು ಮಾರುವ ದಿನ ದೂರ ಇಲ್ಲ’ ಎಂದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲುಕ್ಮಾನ್, ಕೆಪಿಸಿಸಿ ಸದಸ್ಯ ಎಂ.ಎಸ್. ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಜಿಲ್ಲಾ ಘಟಕದ ಕಾರ್ಯದರ್ಶಿ ಮಹಮ್ಮದ್ ಬಡಗನ್ನೂರು ಮಾತನಾಡಿದರು.

ಗಾಂಧಿ ಪಾರ್ಕ್ ಬಳಿಯಲ್ಲಿ ಜಮಾಯಿಸಿದ ಕಾರ್ಯಕರ್ತರು ಬಸ್ ನಿಲ್ದಾಣದವರೆಗೆ ಸೈಕಲ್ ಜಾಥಾ ನಡೆಸಿದರು. ಕಾರೊಂದಕ್ಕೆ ಹಗ್ಗವನ್ನು ಕಟ್ಟಿ ಮೆರವಣಿಗೆಯಲ್ಲಿ ತಂದು ಇಂಧನ ಬೆಲೆ ಏರಿಕೆಯನ್ನು ಖಂಡಿಸಲಾಯಿತು. 

ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕಾಂಗ್ರೆಸ್ ಪದಾಧಿಕಾರಿಗಳಾದ ಉಮಾನಾಥ ಶೆಟ್ಟಿ, ಸೋಮನಾಥ, ಡಿ.ಕೆ. ಅಬ್ದುಲ್ ರಹಿಮಾನ್, ಜೋಕಿಂ ಡಿಸೋಜ,ಡಾ. ರಾಜಾರಾಮ, ಅಬ್ದುಲ್ ರಹಿಮಾನ್ ಯುನಿಕ್, ಅಶ್ರಫ್ ಬಸ್ತಿಕ್ಕಾರ್,
ಸುನಿಲ್ ನೆಲ್ಸನ್, ಪದ್ಮನಾಭ ಪೂಜಾರಿ ಅಳಿಕೆ, ರಾಜೇಂದ್ರ ರೈ ಪೆರುವಾಯಿ, ರಾಧಾಕೃಷ್ಣ ರೈ ಪೆರುವಾಯಿ, ಜಯರಾಮ ಮಾಣಿಲ, ವಿಷ್ಣು ಭಟ್ ಮಾಣಿಲ, ಶ್ರೀಧರ ಬಾಳೆಕಲ್ಲು, ರಮಾನಾಥ ವಿಟ್ಲ, ಅಕ್ಬರುಲ್ ಸಿದ್ದಿಕ್, ಯು.ಟಿ. ತೌಸೀಫ್, ಶಬ್ಬೀರ್ ಕೆಂಪಿ, ನವಾಲ್ ಕೊಳ್ಳೇಜಾಲ್, ಗೀತಾ ದಾಸರಮೂಲೆ, ಸವಿತಾ ಹರೀಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು