ಪುತ್ತೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ವಿಶೇಷ ಸ್ಥಾನ ಪಡೆದಿದೆ. ಪಾರದರ್ಶಕ ಕಾರ್ಯ ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಬ್ಯಾಂಕ್ಗಳನ್ನು ಮೀರಿ ಬೆಳೆದಿದೆ ಎಂದು ಮುಖಂಡ ನಳಿನ್ಕುಮಾರ್ ಕಟೀಲ್ ಹೇಳಿದರು.

ಪುತ್ತೂರು ತಾಲ್ಲೂಕಿನ ಸುಳ್ಯಪದವಿನಲ್ಲಿ ಗುರುವಾರ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸುಳ್ಯಪದವು ಶಾಖೆಯ ನೂತನ ಕಟ್ಟಡ ‘ಪ್ರಕೃತಿ ಸಹಕಾರ ಸೌಧ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ವ್ಯವಸ್ಥೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ನವೋದಯ ಸ್ವಸಹಾಯ ಸಂಘಗಳಿಂದ ಮಹಿಳೆಯರಿಗೆ ಶಕ್ತಿ ತುಂಬಲಾಗಿದೆ. ದೇಶ ಆರ್ಥಿಕವಾಗಿ ಸಾಧನೆ ಮಾಡಲು ಸಹಕಾರ ಸಂಘಗಳ ಕೊಡುಗೆಯೂ ಇದೆ ಎಂದರು.

ಆಡಳಿತ ಕಚೇರಿಯನ್ನು ಉದ್ಘಾಟಿಸಿದ ಮುಖಂಡ ಸಂಜೀವ ಮಠಂದೂರು, ರೈತರ ಬೇಡಿಕೆಗಳನ್ನು ಈಡೇರಿಸುವ ಮೂಲಕ ರೈತರಿಗೆ ಆರ್ಥಿಕ ಚೈತನ್ಯ ತುಂಬುವ ಕೆಲಸವನ್ನು ಸಹಕಾರ ಸಂಘಗಳು ಮಾಡುತ್ತಿವೆ. ಸಹಕಾರ ಸಂಘಗಳು ಸರ್ಕಾರದ ಹಿಡಿತದಿಂದ ದೂರವಿದ್ದು ಸ್ವಂತಿಕೆಯಿಂದ ಕಾರ್ಯಾಚರಿಸಿದರೆ ಮಾತ್ರ ಇನ್ನಷ್ಟು ಶಕ್ತಿ ಬರಲು ಸಾಧ್ಯ ಎಂದರು.

ಭದ್ರತಾ ಕೊಠಡಿಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ನ್ಯಾಯಬೆಲೆ ಅಂಗಡಿಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳೆಜ್ಜ, ರಸಗೊಬ್ಬರ ಗೋದಾಮನ್ನು ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು ಎಸ್.ಎಂ. ಉದ್ಘಾಟಿಸಿದರು.

ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ರಾಮ ಭಟ್ ಬೀರಮಲೆ, ಮಹಮ್ಮದ್ ಬಡಗನ್ನೂರು, ಮಹಾದೇವ ಭಟ್ ಕೊಲ್ಯ, ಸತೀಶ್ ರೈ ಕಟ್ಟಾವು, ಚಂದುಕೂಡ್ಲು ಶ್ರೀನಿವಾಸ ಭಟ್, ಶೇಷಪ್ಪ ಪೂಜಾರಿ ಕಡಮಗದ್ದೆ, ಕೆ.ಪಿ.ಸುಬ್ಬಯ್ಯ, ಬೆಳ್ಳಿಯಪ್ಪ ಗೌಡ, ಶ್ರೀಪತಿ ಭಟ್ ಇಂದಾಜೆ, ಗಿರೀಶ್ ಕುಮಾರ್ ಕನ್ನಡ್ಕ, ಗುರುಕಿರಣ್ ರೈ ಎನ್.ಜಿ., ಅರುಣ್ ಕುಮಾರ್ ಕೆ., ಸೂರ್ಯನಾರಾಯಣ ಭಟ್, ಉಮೇಶ್ ಗೌಡ ಕೆ.ಕನ್ನಯ, ವಿನೋದ್ ಶೆಟ್ಟಿ ಅರಿಯಡ್ಕ, ರಾಜೀವಿ ಎಸ್.ರೈ ಕುಂಬ್ರ, ಮಲ್ಲಿಕಾ ಎ.ಜೆ.ಆಲಂತ್ತಡ್ಕ, ಅಮರನಾಥ ರೈ ಐಂಬಾಗಿಲು, ಸತೀಶ್ ಕರ್ಕೇರ ಮಡ್ಯಂಗಲ, ಶಿವರಾಮ ಬಿ.ಬೊಳ್ಳಾಡಿ, ಶ್ರೀನಿವಾಸ್ ಪ್ರಸಾದ್ ಮುಡಾಲ, ವಸಂತ ಕುಮಾರ್ ಕೌಡಿಚ್ಚಾರ್, ಶರತ್ ಡಿ. ಭಾಗವಹಿಸಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್. ವರದಿ ಮಂಡಿಸಿದರು.

ನಿರ್ದೇಶಕ ಸಂತೋಷ್ ಆಳ್ವ ಗಿರಿನಿಲಯ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.