ಶುಕ್ರವಾರ, ಜುಲೈ 30, 2021
23 °C

ಮಂಗಳೂರು | ವಾರದ ಲಾಕ್‌ಡೌನ್ ಆರಂಭ, ಖರೀದಿಗೆ ಕಾಣದ ದಟ್ಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಗುರುವಾರದಿಂದ ಒಂದು ವಾರದ ಲಾಕ್ ಡೌನ್ ಆರಂಭಗೊಂಡಿದ್ದು, ಬೆಳಿಗ್ಗೆ 8 ರಿಂದ 11 ರತನಕ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದೆ. 

ಮೊದಲ ದಿನವಾದ ಗುರುವಾರ ಅಗತ್ಯ ಸಾಮಗ್ರಿಗಳ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ಜನ ದಟ್ಟಣೆ ಇರಲಿಲ್ಲ. ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಳೆ ಸುರಿಯುತ್ತಿತ್ತು. ಮಲ್ಲಿಕಟ್ಟೆ, ಕಂಕನಾಡಿ, ಕೇಂದ್ರ ಮಾರುಕಟ್ಟೆ ಸೇರಿದಂತೆ ನಗರದಲ್ಲಿ ಖರೀದಿ ಭರಾಟೆ ವಿರಳವಾಗಿತ್ತು.

ಪೂರ್ವಭಾವಿಯಾಗಿ ಲಾಕ್‌ಡೌನ್ ಘೋಷಣೆ, ಪ್ರತಿನಿತ್ಯ ಖರೀದಿಗೆ ಅವಕಾಶ ಹಾಗೂ ಮಳೆಯ ಕಾರಣ ಗ್ರಾಹಕರ ದಟ್ಟಣೆ ಇಲ್ಲ ಎಂದು ವ್ಯಾಪಾರಸ್ಥರು ಅಭಿಪ್ರಾಯ ಪಟ್ಟರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು