ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡುಬಿದಿರೆ: ಹಲಸು-ವೈವಿಧ್ಯಮಯ ಹಣ್ಣುಗಳ ಮಹಾಮೇಳ

Published 13 ಏಪ್ರಿಲ್ 2024, 14:01 IST
Last Updated 13 ಏಪ್ರಿಲ್ 2024, 14:01 IST
ಅಕ್ಷರ ಗಾತ್ರ

ಮೂಡುಬಿದಿರೆ: ಹಲಸು-ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿ ಮೂಡುಬಿದಿರೆ ವತಿಯಿಂದ ಹಲಸು ಸೇರಿದಂತೆ ವೈವಿಧ್ಯಮಯ ಫಲವಸ್ತುಗಳು, ಆಹಾರೋತ್ಸವ, ಕೃಷಿಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾ ಮೇಳ ‘ಸಮೃದ್ಧಿ’ ಜೂನ್ 14ರಿಂದ 16ರವರೆಗೆ ಆಳ್ವಾಸ್‌ನ ಕೃಷಿ ಸಿರಿ ವೇದಿಕೆಯಲ್ಲಿ ಆಯೋಜಿಸಲಾಗಿದೆ.

ವಿವಿಧ ತಳಿಗಳ ಹಲಸಿನ ಹಣ್ಣು, ಮಾವು, ಬಾಳೆಗಳ ವೈವಿಧ್ಯಮಯ ತಳಿಗಳು, ರಂಬುಟಾನ್, ಮ್ಯಾಂಗೋಸ್ಟಿನ್, ಅನಾನಸು, ಪೇರಳೆ, ಬಟರ್‌ಫ್ರುಟ್‌ ಮೊದಲಾದ ತಾಜಾ ಹಣ್ಣುಗಳು ಹಾಗೂ ತರಕಾರಿಗಳು ಒಂದೇ ಕಡೆ ನೋಡುವ, ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ಹಣ್ಣು-ತರಕಾರಿಗಳಿಂದಲೇ ತಯಾರಾದ ಸಿದ್ಧ ತಿನಿಸುಗಳ ಮಳಿಗೆಗಳು, ಸ್ಥಳದಲ್ಲೇ ಕಿತ್ತು ಕೊಡುವ ತಾಜಾ ಹಣ್ಣುಗಳು, ಫಲವಸ್ತುಗಳೂ ದೊರೆಯಲಿವೆ.

ಹಣ್ಣಗಳಿಂದಲೇ ತಯಾರಾದ ತಿನಿಸುಗಳ ಸುಮಾರು 50 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಮಾರಾಟ ಮಾಡುವ ಆಹಾರೋತ್ಪನ್ನಗಳು ಸಂಪೂರ್ಣ ಸಸ್ಯಹಾರವಾಗಿದ್ದು, ಮಾಂಸಾಹಾರ, ಫಾಸ್ಟ್‌ಫುಡ್‌ ನಿಷೇಧಿಸಲಾಗಿದೆ.

ಆಲಂಕಾರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳೂ ಇರಲಿವೆ. ಮಣ್ಣಿನ ಮಡಕೆಗಳು, ಗುಡಿ ಕೈಗಾರಿಕೆ ವಸ್ತುಗಳು, ಖಾದಿ ಬಟ್ಟೆ, ಕೃಷಿ ಪರಿಕರಗಳು, ಆಯುರ್ವೇದ, ಪ್ರಕೃತಿ ಚಿಕಿತ್ಸೆಗೆ ಸಂಬಂಧಿಸಿದ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಸುಮಾರು 200 ಮಳಿಗೆಗಳು ಇರಲಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT