ಶಿವಾಜಿ ಯುವ ಸೇನೆ ಸಂಘಟನೆಯ ಒತ್ತಾಯದ ಮೇರೆಗೆ ಬೆಂದ್ರ್ ತೀರ್ಥದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ಗಿಡಗಳನ್ನು ಬೆಳೆಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕಾಂಕ್ರಿಟ್ ರಸ್ತೆ ಇದೆ. ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾದರೆ ಸ್ಥಳೀಯರ ಜೊತೆಯೂ ಚರ್ಚೆ ನಡೆಸಬೇಕು. ಯಾಕೆಂದರೆ ಗ್ರಾಮೀಣರದ್ದೇ ಆದ ಕೆಲವು ಸಮಸ್ಯೆಗಳು ಇರುವುದರಿಂದ ಸೂಕ್ತ ಸಲಹೆಗಳು ಸಿಗುವ ಸಾಧ್ಯತೆ ಇದೆ.
ಧನ್ಯರಾಜ್ ಶಿವಾಜಿ ಯುವಸೇನೆ ಅಧ್ಯಕ್ಷ
ಟ್ರೆಕಿಂಗ್ ಮಾಡುವಂಥ ಜಾಗದಲ್ಲಿ ಅಭಿವೃದ್ಧಿ ಎಂಬುದೇ ಸೂಕ್ತವಲ್ಲದ ಪರಿಕಲ್ಪನೆ. ಇಂತಹ ತಾಣಗಳು ಪ್ರವಾಸೋದ್ಯಮ ಕೇಂದ್ರಗಳಾಗಬಾರದು. ಕಾಡಿನ ಒಳಗೆ ಹೋಗುವುದೇ ಪ್ರಕೃತಿಯನ್ನು ತಿಳಿಯುವುದಕ್ಕಾಗಿ. ಅದಕ್ಕೆ ನೈಜ ಪರಿಸರವೇ ಬೇಕು. ವಾಸ್ತವದಲ್ಲಿ ಕಾಡಿನ ಒಳಗೆ ಮನುಷ್ಯರು ಪ್ರವೇಶಿಸುವುದೇ ತಪ್ಪು. ಹೋದರೂ ಅಲ್ಲಿನ ಜೀವಜಾಲಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಾರ್ಗದರ್ಶನಕ್ಕಾಗಿ ಸ್ಥಳೀಯರನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದರೆ ಅವರಿಗೆ ಜೀವನೋಪಾಯವೂ ಆಗಬಹುದು.