ವಿಟ್ಲ/ಬಂಟ್ವಾಳ: ಕಲ್ಲಡ್ಕ ಬೋಳಂತೂರು ನಾರ್ಶದ ನಿವಾಸಿ ಮುತ್ತಲಿಬ್ ಅವರು ದುಬೈಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ.

ಹಲವಾರು ದಿನಗಳಿಂದ ಮುತ್ತಲಿಬ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಯಾರಿಗೂ ಸಂಪರ್ಕಕ್ಕೆ ಸಿಗದಿದ್ದುದರಿಂದ ಕುಟುಂಬಸ್ಥರು ಆತಂಕಕ್ಕೀಡಾಗಿದ್ದರು.

ದುಬೈನ ಅಲ್-ರಫಾದಲ್ಲಿ ಭಾನುವಾರ ಅವರ ಮೃತದೇಹ ಪತ್ತೆಯಾಗಿತ್ತು. ಅಲ್ಲಿನ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಮುತ್ತಲಿಬ್ ಅವರ ಪಾಸ್ಪೋರ್ಟ್ ಸಂಖ್ಯೆ ಆಧರಿಸಿ, ಭಾರತೀಯ ಪ್ರಜೆ ಎಂದು ಖಚಿತ ಪಡಿಸಿಕೊಂಡ ಅಲ್ಲಿನ ಪೊಲೀಸರು, ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಮೃತದೇಹ ಪತ್ತೆಗೆ ಕರ್ನಾಟಕ ಕಲ್ಚರಲ್ ಫೋರಂ (ಕೆಸಿಎಫ್) ಸಹಕಾರ ನೀಡಿತ್ತು. ಅದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಡಳಿತದ ಮೂಲಕ ವಿಳಾಸ ಪತ್ತೆ ಹಚ್ಚ ಲಾಯಿತು. ಶವ ದುಬೈನ ರಾಶೀದ್ ಆಸ್ಪತ್ರೆಯಲ್ಲಿದೆ.

ಮುತ್ತಲಿಬ್ ಬೋಳಂತೂರು ನಾರ್ಶದ ಸೂಫಿ ಮುಕ್ರೀಕರ ಪುತ್ರನಾಗಿದ್ದು, ಈ ಹಿಂದೆ ಧಾರ್ಮಿಕ ಗುರುವಾಗಿ ಕೆಲಸ ಮಾಡಿದ್ದರು. ಆನಂತರ ಎಂಜಿನಿಯರಿಂಗ್ ಪದವಿ ಪಡೆದು, ಕೆಲಸಕ್ಕೆ ಸೇರಿಕೊಂಡಿದ್ದರು. ಮುತ್ತಲಿಬ್ ನಾರ್ಶ ಅಂಕಣ ಬರಹಗಾರರಾಗಿದ್ದರು. ‘ವಿಜಯಕಿರಣ’, ‘ಮದರಂಗಿ’ ಪತ್ರಿಕೆಗೆ ಅಂಕಣ ಬರೆದು ಪ್ರಸಿದ್ಧಿ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.