ಮಂಗಳವಾರ, ಜೂನ್ 22, 2021
22 °C

ಪುತ್ತೂರು: ಮಾಸ್ಕ್ ಧರಿಸಿ ನಗರ ಸುತ್ತಿದ ಶ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ಕೋವಿಡ್ ಹರಡುವುದನ್ನು ತಡೆಯಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂತರ ಕಾಪಾಡಿಕೊಳ್ಳಬೇಕು ಎಂದು ಎಷ್ಟೇ ಹೇಳಿದರೂ ಜನರು ಕಿವಿಗೆ ಹಾಕೋದೇ ಇಲ್ಲ. ಆದರೆ, ಇಲ್ಲೊಬ್ಬರು ತನ್ನ ಪ್ರೀತಿಯ ಶ್ವಾನಕ್ಕೂ ಮಾಸ್ಕ್ ಧರಿಸುವ ಮೂಲಕ ಜಾಗೃತಿಯ ಸಂದೇಹ ರವಾನಿಸಿದ್ದಾರೆ.

ಕೋವಿಡ್‌ ಕರ್ಫ್ಯೂ ವೇಳೆ ಬೆಳಿಗ್ಗೆ 6ರಿಂದ 10 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಈ ಸಂದರ್ಭದಲ್ಲಿ ಪುತ್ತೂರು ನಗರದದ ದರ್ಬೆಯಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸರು ಅನಗತ್ಯ ಓಡಾಟದ ವಾಹನಗಳನ್ನು ನಿಯಂತ್ರಿಸುವ ಸಲುವಾಗಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದಿಚಕ್ರ ವಾಹನದಲ್ಲಿದ್ದ ಶ್ವಾನಕ್ಕೂ ಮಾಸ್ಕ್ ಧಾರಣೆ ಮಾಡಿರುವುದು ಕಂಡು ಬಂತು.

ದರ್ಬೆ ಪ್ರವೀಣ್ ಡ್ರೈವಿಂಗ್ ಸ್ಕೂಲ್ ಸಂಸ್ಥೆಯ ಮಾಲೀಕ ಪ್ರವೀಣ್ ಡಿಸೋಜ ಅವರು ತನ್ನ ಪ್ರೀತಿಯ ಎರಡೂವರೆ ವರ್ಷದ ಶ್ವಾನದ ಮುಖಕ್ಕೆ ಮಾಸ್ಕ್ ಹಾಕಿ, ತನ್ನ ದಿಚಕ್ರ ವಾಹನದಲ್ಲಿ ಕುಳ್ಳಿರಿಸಿಕೊಂಡಿದ್ದರು.

ಕ್ವಾರೈಂಟನ್‌ನಲ್ಲಿರುವವರಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಹಾಗೂ ಕೋವಿಡ್ ಲಸಿಕೆ ಪಡೆಯಲು ಬಯಸುವವರನ್ನು ತಮ್ಮ ವಾಹನದಲ್ಲಿ ಉಚಿತವಾಗಿ ಕರೆದುಕೊಂಡು ಹೋಗುವ ಸೇವೆಯನ್ನೂ ಪ್ರವೀಣ್ ಡಿಸೋಜ ಮಾಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು