ಶಿರ್ವ: ಏಡನ್ ಕ್ರಿಸ್‌ಗೆ ರಕ್ಷಣಾ ಸಚಿವರಿಂದ ಗೌರವ

ಶಿರ್ವ: ಗಣರಾಜ್ಯೋತ್ಸವದ ಮುನ್ನಾದಿನ ದೆಹಲಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶಿರ್ವ ಡಾನ್ ಬಾಸ್ಕೊ ಇಂಗ್ಲಿಷ್ ಮಾಧ್ಯಮ ಶಾಲಾ 5ನೇ ತರಗತಿ ವಿದ್ಯಾರ್ಥಿ ಏಡನ್ ಕ್ರಿಸ್ ದಾಂತಿಗೆ ಅಭಿನಂದನಾ ಪತ್ರದ ಜೊತೆಗೆ ₹10ಸಾವಿರ ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.
ನ.22ರಂದು ರಕ್ಷಣಾ ಸಚಿವಾಲಯವು ಹಮ್ಮಿಕೊಂಡಿದ್ದ ‘ವೀರ್ ಗಾಥಾ -2’ ಕಾರ್ಯಕ್ರಮದ ಭಾಗವಾಗಿ ವೀರಯೋಧರ ಜೀವನದ ಬಗ್ಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಏಡನ್ ಕ್ರಿಸ್ ದಾಂತಿ ವಿಕ್ರಮ್ ಭಾತ್ರಾ ಅವರ ಜೀವನದ ಬಗ್ಗೆ ಹಿಂದಿ ಕವನ ರಚಿಸಿದ್ದರು. 25 ವಿದ್ಯಾರ್ಥಿಗಳಲ್ಲಿ ಏಡನ್ ಕ್ರಿಸ್ ಒಬ್ಬರಾಗಿ ಆಯ್ಕೆಯಾಗಿದ್ದರು. ಈತ ಸಂತೋಷ್ ದಾಂತಿ, ಜೋಯ್ಸ್ ದಂಪತಿ ಪುತ್ರ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.