ಪುತ್ತೂರು: ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿ ಎರಡು ವರ್ಷಗಳಿಂದ ನಿರಂತರವಾಗಿ ಕೃಷಿ ಹಾನಿ ಮಾಡುತ್ತಿರುವ ಕಾಡಾನೆಯನ್ನು ಹಿಡಿದು ಶಾಶ್ವತ ಪರಿಹಾರ ಒದಗಿಸಬೇಕು. ಕೃಷಿಗೆ ಹಾನಿ ಮಾಡುತ್ತಿರುವ ಹಂದಿಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂಬ ಆಗ್ರಹ ಕೆಯ್ಯೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ವ್ಯಕ್ತವಾಯಿತು.

ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅವರ ಅಧ್ಯಕ್ಷತೆಯಲ್ಲಿ ಕೆಯ್ಯೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಅವರು ಮಾರ್ಗದರ್ಶಿಯಾಗಿ ಅಧಿಕಾರಿಯಾಗಿದ್ದರು.

ವಿಷಯ ಪ್ರಸ್ತಾಪಿಸಿದ ಕೃಷಿಕ ಶಿವಶ್ರೀರಂಜನ್ ರೈ ದೇರ್ಲ ಅವರು, ಎರಡು ವರ್ಷಗಳಿಂದ ಕಾಡಾನೆ ಕೃಷಿ ಹಾನಿ ಮಾಡುತ್ತಿದೆ. ಕಾಡಾನೆಯಿಂದಾಗಿ ಪಕ್ಕದ ಗ್ರಾಮದ ಒಬ್ಬರು ಮಹಿಳೆ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆಯವರು ಆನೆಯನ್ನು ಓಡಿಸಿದರೂ, ಮರುದಿನ ಮತ್ತೆ ಬರುತ್ತಿದೆ. ಇದರಿಂದಾಗಿ ಕೃಷಿಕರಿಗೆ ಕೃಷಿ ಹಾನಿ ಸಂಕಷ್ಟದ ಜತೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಆನೆ ಹಾವಳಿಯ ಬಗ್ಗೆ ಶಾಸಕರ ನೇತ್ವದಲ್ಲಿ ಸಭೆಯೂ ನಡೆದಿದೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಆನೆಯನ್ನು ಓಡಿಸುವ ಬದಲು ಅದನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಕಿಟ್ಟ ಅಜಿಲ ಕಣಿಯಾರು ಅವರೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಒಂದು ಕಡೆಯಲ್ಲಿ ಕಾಡಾನೆ ದಾಳಿ ಮಾಡಿ ಕೃಷಿ ನಾಶ ಮಾಡುತ್ತಿದ್ದರೆ, ಇನ್ನೊಂದೆಡೆ ಹಂದಿಗಳ ಕಾಟ, ಮತ್ತೊಂದೆಡೆ ಮಂಗಗಳ ಹಾವಳಿ ಅತಿಯಾಗಿದೆ. ಇದರಿಂದಾಗಿ ಕೃಷಿಕ ನಷ್ಟ ಅನುಭವಿಸಂತಾಗಿದೆ ಎಂದ ಕೃಷಿಕ ಶಿವಶ್ರೀರಂಜನ್ ರೈ ದೇರ್ಲ, ಕೇರಳ ಸರ್ಕಾರ ಹಂದಿಗಳನ್ನು ಕೊಲ್ಲಲು ಅನುಮತಿ ಕೊಟ್ಟಿದೆ. ಅದೇ ರೀತಿ ನಮ್ಮ ರಾಜ್ಯ ಸರ್ಕಾರವೂ ಕೃಷಿ ಹಾನಿ ಮಾಡುವ ಹಂದಿಗಳನ್ನು ಕೊಲ್ಲಲು ಅನುಮತಿ ನೀಡಲೇಬೇಕು ಎಂದು ಆಗ್ರಹಿಸಿದರು.

ಚುನಾವಣೆ ಸಂದರ್ಭಗಳಲ್ಲಿ ಪರವಾನಿಗೆ ಇರುವ ರೈತರ ಬಂದೂಕುಗಳನ್ನು ಪೊಲೀಸ್ ಠಾಣೆಯಲ್ಲಿ ಇಡಬೇಕಾಗುತ್ತದೆ. ಈ ರೀತಿ ಠಾಣೆಯಲ್ಲಿ ರಾಶಿ ಹಾಕುವುದರಿಂದ ಬಂದೂಕುಗಳು ಹಾಳಾಗುವ ಸಾಧ್ಯತೆ ಹೆಚ್ಚಿದೆ. ರೈತರ ಬಂದೂಕುಗಳಿಂದ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಗ್ರಾಮದಲ್ಲಿ ಅದೆಷ್ಟೋ ಮಂದಿಯಲ್ಲಿ ಕಳ್ಳ ಬಂದೂಕುಗಳಿವೆ. ಈ ಬಗ್ಗೆ ಪೊಲೀಸರು ಗಮನ ಹರಿಸಬೇಕಾಗಿದೆ ಎಂದರು.

ಬಿಪಿಎಲ್ ಕಾರ್ಡ್ ಕುರಿತು ಪ್ರಸ್ತಾಪಿಸಿದ ರಾಮಕೃಷ್ಣ ಭಟ್ ಅವರು, ಕಾರ್ಡ್ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಯಬೇಕು ಎಂದು ಒತ್ತಾಯಿಸಿದರು.

ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರಾದ ಅಬ್ದುಲ್ ಖಾದರ್ ಮೇರ್ಲ, ಬಟ್ಯಪ್ಪ ರೈ ದೇರ್ಲ, ಜಯಂತಿ ಎಸ್.ಭಂಡಾರಿ, ಅಮಿತಾ ಎಚ್.ರೈ, ಸುಭಾಷಿಣಿ ಕೆ., ತಾರಾನಾಥ ಕಂಪ, ವಿಜಯ ಕುಮಾರ್ ಸಣಂಗಳ, ಮೀನಾಕ್ಷಿ ವಿ.ರೈ, ಜಯಂತ ಪೂಜಾರಿ ಕೆಂಗುಡೇಲು, ಗಿರಿಜಾ ಕೆ., ಶೇಷಪ್ಪ ದೇರ್ಲ, ಮಮತಾ ರೈ ಭಾಗವಹಿಸಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ. ವರದಿ ಮಂಡಿಸಿದರು. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.