ಗುರುವಾರ , ಸೆಪ್ಟೆಂಬರ್ 23, 2021
22 °C
ಸಂಸ್ಕಾರ ಭಾರತಿ ಗುರುವಂದನೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ

ಸಾಧಕರಿಗೆ ಸನ್ಮಾನ ಅರ್ಥಪೂರ್ಣ: ಮೇಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಲಲಿತ ಕಲೆಗಳ ಸಂವರ್ಧನೆಗೆ ಸಮರ್ಪಿತವಾದ ರಾಷ್ಟ್ರೀಯ ಸಂಘಟನೆ ಸಂಸ್ಕಾರ ಭಾರತಿ ಮಂಗಳೂರು ಘಟಕದಿಂದ ಗುರು ಪೂರ್ಣಿಮೆಯಂದು ಪ್ರತಿವರ್ಷ  ಕಲೆ ಹಾಗೂ ಸೇವಾ ವಿಭಾಗದಲ್ಲಿ ಯಾವುದೇ ಪ್ರಚಾರವಿಲ್ಲದ ಸಾಧಕರನ್ನು ಗುರುತಿಸಿ ಅವರ ಮನೆಯಲ್ಲೇ ಗೌರವಿಸುವ ಕಾರ್ಯ ನಿಜಕ್ಕೂ ಅರ್ಥಪೂರ್ಣ’ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಗುರು ಪೂರ್ಣಿಮೆಯಂದು ರಾಷ್ಟ್ರೀಯ ಸಂಘಟನೆ ಸಂಸ್ಕಾರ ಭಾರತಿ ಮಂಗಳೂರು ಘಟಕದಿಂದ ಸಾಧಕರನ್ನು ಗುರುತಿಸಿ ಅವರ ಮನೆಯಲ್ಲೇ ಗೌರವಿಸುವ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಸಂಸ್ಕಾರ ಭಾರತಿ ಪ್ರಾಂತ ಸಹ ಕಾರ್ಯದರ್ಶಿನಾಗರಾಜ್ ಶೆಟ್ಟಿ, ಮಂಗಳೂರು ಘಟಕದ ಅಧ್ಯಕ್ಷ ಅಡ್ಯಾರ್ ಪುರುಷೋತ್ತಮ ಭಂಡಾರಿ, ಉಪಾಧ್ಯಕ್ಷ ಧನಪಾಲ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಮಾಧವ್ ಭಂಡಾರಿ , ಕೋಶಾಧಿಕಾರಿ ರಘುವೀರ್ ಗಟ್ಟಿ, ಸಂಘಟನಾ ಕಾರ್ಯದರ್ಶಿ ಗಣೇಶ್ ಕುಮಾರ್, ನೃತ್ಯ ವಿಧಾ ಪ್ರಮುಖ್ ವಿದುಷಿ ಶ್ರೀಲತಾ ನಾಗರಾಜ್ ಹಾಗೂ ಸದಸ್ಯರು,  ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಲಕಿಶೋರ್ ಡಿ. ಶೆಟ್ಟಿ, ಹಳೆಕೋಟೆ ಮಾರಿಯಮ್ಮ ‌ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ತಾರನಾಥ್ ಶೆಟ್ಟಿ ಬೋಳಾರ್, ಮಹಾನಗರ ಪಾಲಿಕೆ ಸದಸ್ಯರಾದ ಲೀಲಾ ಪ್ರಕಾಶ್, ಲೋಕೇಶ್ ಬೊಳ್ಳಾಜೆ ಕಾಟಿಪಳ್ಳ, ಆರ್‌ಎಸ್‌ಎಸ್‌ ಕಾಟಿಪಳ್ಳ ಸಂಘಚಾಲಕ ವಸಂತ ರಾವ್, ಸಂಪರ್ಕ ಪ್ರಮುಖ್ ಜಯಪ್ರಕಾಶ್, ಎಸ್‌ಡಿಎಂ ಆರ್ಯುವೇದ ಆಸ್ಪತ್ರೆಯ ಆಡಳಿತ ನಿರ್ದೇಶಕಿ ಡಾ.ಪ್ರತಿಭಾ ರೈ,  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಚೇತಕ್ ಪೂಜಾರಿ, ಡಾ.ಅರುಣ್ ಉಳ್ಳಾಲ್, ಕರ್ನೂರ್ ಮೋಹನ್ ರೈ, ಪ್ರವೀಣ್ ಕುಂಪಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು