ಪುತ್ತೂರು: ತಾಲ್ಲೂಕಿನ ಈಶ್ವರಮಂಗಲ ಪೊಲೀಸ್ ಹೊರಠಾಣೆಗೆ ಈಶ್ವರಮಂಗಲ ಪೇಟೆ ಸಮೀಪದಲ್ಲೇ 50 ಸೆಂಟ್ಸ್ ಜಾಗ ಮಂಜೂರಾಗಿ ಇಲಾಖೆ ಹೆಸರಲ್ಲಿ ಜಾಗದ ಪಹಣಿ ಪತ್ರವೂ ಸಿದ್ಧವಾಗಿದೆ. ಆದರೆ, ಸ್ವಂತ ಕಟ್ಟಡ ನಿರ್ಮಾಣವಾಗಿಲ್ಲ. 14 ವರ್ಷಗಳಿಂದ ಬಾಡಿಗೆ ಕೊಠಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಈಶ್ವರಮಂಗಲ ಪೊಲೀಸ್ ಠಾಣೆಯ ಸ್ಥಳ ಬದಲಾಗಿದೆಯೇ ಹೊರತು ವ್ಯವಸ್ಥೆಗಳಲ್ಲಿ ಯಥಾಸ್ಥಿತಿ ಇದೆ.

ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಈಶ್ವರಮಂಗಲ ಶಾಖಾ ಕಟ್ಟಡದ ತಳ ಅಂತಸ್ತಿನಲ್ಲಿ 4 ಕೊಠಡಿಗಳನ್ನು ಬಾಡಿಗೆಗೆ ಪಡೆದು 2011ರ ಅಕ್ಟೋಬರ್ನಲ್ಲಿ ಈಶ್ವರಮಂಗಲ ಪೊಲೀಸ್ ಹೊರಠಾಣೆ ಆರಂಭಿಸಲಾಗಿತ್ತು. ಆ ವೇಳೆ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಈ ಪೊಲೀಸ್ ಹೊರ ಠಾಣೆಯನ್ನು ಉದ್ಘಾಟಿಸಿದ್ದರು.

ಇಕ್ಕಟ್ಟಿನ ಕೊಠಡಿ, ಅಸಮರ್ಪಕ ವಸತಿ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಗಳಿಲ್ಲದ ಈ ಬಾಡಿಗೆ ಕಟ್ಟಡದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿದ್ದ ಪೊಲೀಸ್ ಹೊರ ಠಾಣೆ ಅಂದಿನಿಂದ ಇತ್ತೀಚಿನವರೆಗೂ ಅದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು.

ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯವರು ಈಶ್ವರಮಂಗಲ ಶಾಖಾ ಕಟ್ಟಡದಲ್ಲಿ ವ್ಯವಹಾರ ವಿಸ್ತರಿಸುವ ಸಂಬಂಧ 2017ರಲ್ಲೇ ಕಟ್ಟಡ ಬಿಟ್ಟು ಕೊಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡತೊಡಗಿದ್ದರು. ಈ ನಡುವೆ ಕಟ್ಟಡ ಬಿಟ್ಟುಕೊಡುವಂತೆ ಎಸ್ಪಿಗೂ ಮನವಿ ಮಾಡಿದ್ದರು. 11 ತಿಂಗಳ ಬಾಡಿಗೆ ಕರಾರು ಪೂರ್ಣಗೊಂಡ ಬಳಿಕ ಕರಾರನ್ನು ನವೀಕರಣ ಮಾಡಿರಲಿಲ್ಲ. ಎಸ್ಪಿ ಸೂಚನೆಯಂತೆ ಹೊಠ ಠಾಣೆಯನ್ನು ಅನಿವಾರ್ಯವಾಗಿ ಈಶ್ವರಮಂಗಲ-ಸುಳ್ಯಪದವು ರಸ್ತೆಯ ಗೋಳಿತ್ತಡಿ ಎಂಬಲ್ಲಿನ ಖಾಸಗಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಕೊರತೆಗಳಿಗೂ ಸಿಕ್ಕಿಲ್ಲ ಪರಿಹಾರ: ಈಶ್ವರಮಂಗಲ ಪೊಲೀಸ್ ಹೊರ ಠಾಣೆಯಲ್ಲಿ ಎಎಸ್ಐ ಸೇರಿ 9 ಹುದ್ದೆಗಳಿದ್ದರೂ ಈಗ ಇರುವುದು ಒಬ್ಬ ಎಎಸ್ಐ, ಒಬ್ಬ ಹೆಡ್ಕಾನ್ಸ್ಟೆಬಲ್, ಇಬ್ಬರು ಕಾನ್ಸ್ಟೆಬಲ್ ಮಾತ್ರ. ಈಶ್ವರಮಂಗಲ ಪೊಲೀಸ್ ಹೊರ ಠಾಣೆ ವ್ಯಾಪ್ತಿಗೆ ಕರ್ನಾಟಕ– ಕೇರಳ ಗಡಿಪ್ರದೇಶ ವ್ಯಾಪ್ತಿಯಲ್ಲಿ ಬರುವ ನೆಟ್ಟಣಿಗೆ ಮುಡ್ನೂರು ಮತ್ತು ಪಡುವನ್ನೂರು ಗ್ರಾಮಗಳು ಸೇರುತ್ತವೆ. ಕೋಮುಸೂಕ್ಷ್ಮ ಪ್ರದೇಶವೂ ಈ ಠಾಣಾ ವ್ಯಾಪ್ತಿಯಲ್ಲೇ ಇದೆ. ಗಡಿಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ನೀಗಿಸುವುದು ಮತ್ತು ಇಲ್ಲಿನ ಪೊಲೀಸರಿಗೆ ಸೂಕ್ತ ಸವಲತ್ತು ಒದಗಿಸುವುದು ಅನಿವಾರ್ಯವಾಗಿದೆ ಎಂಬುದು ಈ ಭಾಗದ ಜನರ ಅಭಿಪ್ರಾಯ. ಆದರೆ, ಇಲ್ಲಿನ ಪೊಲೀಸರ ಕರ್ತವ್ಯ ನಿರ್ವಹಿಸಲು ಇಲಾಖಾ ಜೀಪ್ ವ್ಯವಸ್ಥೆಯೂ ಇಲ್ಲ.

ಶಾಸಕರಿಗೆ ಮನವಿ: ಈಶ್ವರಮಂಗಲ ಹೊರಠಾಣೆಗೆ ಸ್ವಂತ ಕಟ್ಟಡದ ಅವಶ್ಯಕತೆ, ಅನುದಾನದ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಗೃಹ ಸಚಿವರ ಜತೆ ಮಾತನಾಡುವುದಾಗಿಯೂ, ಸಿಬ್ಬಂದಿ ಕೊರತೆ ನೀಗಿಸುವ ಬಗ್ಗೆಯೂ ಪ್ರಯತ್ನಿಸುತ್ತೇನೆ ಎಂದಿದ್ದರು. ಈ ವಿಚಾರದಲ್ಲಿ ಶಾಸಕ ಕಾಳಜಿ ವಹಿಸಬೇಕು. ಇಲ್ಲಿನ ಪೊಲೀಸರಿಗೆ ಬಾಡಿಗೆ ಕಟ್ಟಡದಿಂದ ಶೀಘ್ರವಾಗಿ ಮುಕ್ತಿ ನೀಡುವ ಜತೆಗೆ ಸಿಬ್ಬಂದಿ ಕೊರತೆ ಹಾಗೂ ವಾಹನದ ಕೊರತೆ ನೀಗಿಸಬೇಕು ಎಂಬುದು ಈ ಭಾಗದ ಗ್ರಾಮಸ್ಥರ ಆಗ್ರಹ.

ಈಶ್ವರಮಂಗಲ ಪೊಲೀಸ್ ಹೊಠ ಠಾಣೆಗೆ ಈಶ್ವರಮಂಗಲ ಸೊಸೈಟಿ ಶಾಖೆಯ ಪಕ್ಕದಲ್ಲೇ ಪಂಚಾಯಿತಿ ವತಿಯಿಂದ, ಅಲ್ಲಿನ ಸ್ಥಳೀಯರಾದ ಗಿರೀಶ್ ರೈ ಮರಕಡ ಅವರ ಸಹಕಾರದೊಂದಿಗೆ 50 ಸೆಂಟ್ಸ್ ಜಾಗ ಗುರುತಿಸಿ ಕಾದಿರಿಸಿದ್ದೇವೆ. ಈ ಸ್ಥಳದ ಪಹಣಿ ಪತ್ರವೂ ಇಲಾಖೆಯ ಹೆಸರಿನಲ್ಲಿ ಆಗಿದೆ. ಅಲ್ಲಿ ಸ್ವಂತ ಕಟ್ಟಡ ನಿರ್ಮಿಸುವಂತೆ, ಸಿಬ್ಬಂದಿ ಕೊರತೆಯನ್ನು ನೀಗಿಸುವಂತೆ ಹಾಗೂ ವಾಹನದ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಸಂಬಂಧಪಟ್ಟವರಿಗೆ ತಿಳಿಸಿದ್ದೇವೆ. ಗೃಹ ಸಚಿವರಿಗೂ ಮನವಿ ಸಲ್ಲಿಸಿದ್ದೆವು. ಶಾಸಕ ಅಶೋಕ್ಕುಮಾರ್ ರೈ ಅವರಿಗೂ ಈ ಕುರಿತು ಮನವಿ ಮಾಡಿದ್ದು, ಅವರಿಂದ ಅನುದಾನ ಒದಗಿಸುವ ಭರವಸೆ ಸಿಕ್ಕಿದೆ. ಪೊಲೀಸ್ ಹೊರ ಠಾಣೆಗೆ ಸ್ವಂತ ಕಟ್ಟಡ ಒದಗಿಸುವಲ್ಲಿ ನಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ನಾವು ಮಾಡಿದ್ದೇವೆ ಎಂದು ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.