ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ರಿಕ್ಷಾದಲ್ಲಿ ಕುಕ್ಕರ್, ವೈರ್, ಬೋಲ್ಟ್ ಇತ್ತು ಎಂದ ಪ್ರತ್ಯಕ್ಷದರ್ಶಿ

Last Updated 20 ನವೆಂಬರ್ 2022, 7:11 IST
ಅಕ್ಷರ ಗಾತ್ರ

ಮಂಗಳೂರು: ನಗರದ ಗರೋಡಿ ಯಲ್ಲಿ ಶನಿವಾರ ಸ್ಫೋಟ ಸಂಭವಿಸಿದ ಆಟೊರಿಕ್ಷಾದಲ್ಲಿ ಕುಕ್ಕರ್, ನಟ್ಟು, ಬೋಲ್ಟ್ ಹಾಗೂ ವೈರ್ ಗಳಿದ್ದವು ಎಂದು ಪ್ರತ್ಯಕ್ಷದರ್ಶಿ ಸುಭಾಷ್ ಶೆಟ್ಟಿ ತಿಳಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಶನಿವಾರ 5ಗಂಟೆ ಒಳಗೆ ಕೃತ್ಯ ಸಂಭವಿಸಿದೆ. ಆಗ ನಾನು ಸಮೀಪದಲ್ಲಿರುವ ನಮ್ಮ ತರಕಾರಿ ಅಂಗಡಿಯಲ್ಲಿದ್ದೆ. ನಮಗೆ ದೊಡ್ಡ ಪಟಾಕಿ ಸ್ಫೋಟಿಸಿದ ಸದ್ದು ಆಟೋರಿಕ್ಷಾದಲ್ಲಿ ಕೇಳಿಸಿತು. ಸ್ಥಳಕ್ಕೆ ಧಾವಿಸಿ ನೋಡಿದಾಗ ರಿಕ್ಷಾ ಚಾಲಕ ತಲೆ ಸುಟ್ಟು ಹೋಗಿತ್ತು. ದಟ್ಟ ಹೊಗೆ ಕಾಣಿಸಿತ್ತು‌ ಪ್ರಯಾಣಿಕ ಎರಡೆರಡು ಬಟ್ಟೆ ಹಾಕಿದ್ದ. ಆತನ ಕೈ ಕೂಡ ಸುಟ್ಟು ಹೋಗಿತ್ತು. ನೀರು ಹಾಕಿ ಬೆಂಕಿ ನಂದಿಸಿದೆವು.ಬೇರೆ ಆಟೊರಿಕ್ಷಾದಲ್ಲಿ ಅವರನ್ನು ಆಸ್ಪತ್ರೆಗೆ ಕಳುಹಿಸಿದೆವು. ಬೆಂಕಿ ನಿಂದಿಸಿ ಟ್ರಾಫಿಕ್ ಜಾಮ್ ಆಗಬಾರದು ಎಂಬ ಕಾರಣಕ್ಕೆ ಸ್ಥಳದಲ್ಲಿದ್ದ ಆಟೊರಿಕ್ಷಾವನ್ನು ಪಕ್ಕಕ್ಕೆ ಸರಿಸಿದೆವು. ಸ್ಫೋಟ ಸಂಭವಿಸಿದಾಗ ಇಲ್ಲಿ ಹೆಚ್ಚು ಜನ ಇರಲಿಲ್ಲ’ಎಂದರು.

ಆಟೊರಿಕ್ಷಾದವರು ನಮ್ಮ ಪರಿಚಯದವರೇ. ಅವರು ತಲೆ ಕೂದಲೆಲ್ಲ ಸುಟ್ಟು ಹೋಗಿದೆ. ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿದ್ದು ನಾನೆ. ರಿಕ್ಷಾದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿರಬಹುದು ಎಂದು ಮೊದಲು ಭಾವಿಸಿದ್ದೆವು. ಆದರೆ, ನಂತರ ನೋಡುವಾಗ ಕುಕ್ಕರ್, ಬೋಲ್ಟ್, ನಟ್ಟು, ಬ್ಯಾಟರಿ ಹಾಗೂ ವೈರ್‌ಗಳುರಿಕ್ಷಾದಲ್ಲಿದ್ದವು. ಸಂಶಯ ಬಂದು ಕಂಕನಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದೆಎಂದು ಅವರು ತಿಳಿಸಿದರು.

‘ರಿಕ್ಷಾ ಚಾಲಕ ಉಜ್ಜೋಡಿಯವರು. ಪ್ರಯಾಣಿಕನನ್ನು ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣದಿಂದ ಕರೆತಂದಿದ್ದಾಗಿ ತಿಳಿಸಿದ್ದರು. ಅವರು ಎಲ್ಲಿಗೆ ಹೋಗುತ್ತಿದ್ದರು ಎಂಬುದು ಗೊತ್ತಿಲ್ಲ’ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT