ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಮಹಾಮಾತೆ ದೇಯಿ ಬೈದ್ಯೆತಿ ಅಮ್ಮನ ಮಡಿಲು ಪ್ರಸಾದ ಕಾರ್ಯಕ್ರಮದಲ್ಲಿ ಮಹಿಳೆಯರು ಪ್ರಸಾದ ಸ್ವೀಕರಿಸಿದರು.

ಕ್ಷೇತ್ರದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಸಾನ್ನಿಧ್ಯಗಳಿಗೆ ನವಕ ಕಲಶಾಭಿಷೇಕ, ಮಧ್ಯಾಹ್ನ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ ನಡೆಯಿತು. ಮಹಾಪೂಜೆಯ ಬಳಿಕ 9 ಮಂದಿ ಮಾತೆಯರಿಗೆ ತುಳುನಾಡ ಗೌರವ ರೂಪದಲ್ಲಿ ಅರಸಿನ ಕಂಕುಮ ತಿಲಕವಿಟ್ಟು, ಬಳೆ ತೊಡಿಸಿ, ಸೀರೆ-ಮಲ್ಲಿಗೆ ನೀಡಿ ಮಡಿಲು ತುಂಬಿಸುವ ಕಾರ್ಯಕ್ರಮ ನಡೆಯಿತು. ನಂತರ ದೇಯಿ ಬೈದ್ಯೆತಿ ಅಮ್ಮನ ಮಡಿಲು ಸೇವೆ ಪ್ರಸಾದ ವಿತರಣೆ ನಡೆಯಿತು.

ಪ್ರಮುಖರಾದ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಪೀತಾಂಬರ ಹೇರಾಜೆ, ಡಾ.ರಾಜಶೇಖರ ಕೋಟ್ಯಾನ್, ಜಯಂತ ನಡುಬೈಲು, ರವಿ ಪೂಜಾರಿ ಚಿಲಿಂಬಿ, ಡಾ.ರಾಜರಾಮ್ ಕೆ.ಬಿ., ಶ್ರೀಧರ ಪೂಚಾರಿ ಗೆಜ್ಜೆಗಿರಿ, ಮೋಹನ್ದಾಸ್ ವಾಮಂಜೂರು, ಡಾ.ಸಂತೋಷ್ ಬೈರಂಪಳ್ಳಿ, ಸಂಜೀವ ಪೂಜಾರಿ ಬಿರ್ವ, ಶೈಲೇಂದ್ರ ವೈ.ಸುವರ್ಣ, ದೀಪಕ್ ಕೋಟ್ಯಾನ್, ಉಲ್ಲಾಸ್ ಕೋಟ್ಯಾನ್, ಹರೀಶ್ ಸಾಲ್ಯಾನ್ ಮುಂಬೈ, ಪ್ರಶಾಂತ್ ಪೂಜಾರಿ ಮಸ್ಕತ್, ಪ್ರಮಲ್ ಕುಮಾರ್ ಕಾರ್ಕಳ, ರಾಜೇಂದ್ರ ಚಿಲಿಂಬಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.