ಮಂಗಳೂರು: ನಗರದಲ್ಲಿ ಅನಧಿಕೃತವಾಗಿ ಗೋ ಮಾಂಸವನ್ನು ಸಾಗಿಸುತ್ತಿದ್ದ ಗೂಡ್ಸ್ ರಿಕ್ಷಾವನ್ನು ಕದ್ರಿ ಠಾಣೆಯ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.

ಗೂಡ್ಸ್ ರಿಕ್ಷಾದಲ್ಲಿ ಮಾಂಸ ಸಾಗಿಸುತ್ತಿರುವ ಬಗ್ಗೆ ಸಂಶಯಗೊಂಡ ಬಜರಂಗದಳ ಕಾರ್ಯಕರ್ತರು ಅದನ್ನು ತಡೆದು ಪರಿಶೀಲಿಸಿದ್ದರು. ರಿಕ್ಷಾದಲ್ಲಿ ಭಾರಿ ಪ್ರಮಾಣದಲ್ಲಿ ಗೋಮಾಂಸ ಪತ್ತೆಯಾಗಿತ್ತು.

'ನಗರದಲ್ಲಿದ್ದ ಏಕೈಕ ಕಸಾಯಿಖಾನೆಯನ್ನು ಪಾಲಿಕೆ ಈಚೆಗೆ ಬಂದ್ ಮಾಡಿಸಿದೆ. ಆದರೂ ಇಷ್ಟೊಂದು ಪ್ರಮಾಣದಲ್ಲಿ ಗೋಮಾಂಸ ಎಲ್ಲಿಂದ ಬಂತು' ಎಂದು ಬಜರಂಗದಳದ ಕಾರ್ಯಕರ್ತರು ಗೂಡ್ಸ್ ರಿಕ್ಷಾ ಚಾಲಕನನ್ನು ಪ್ರಶ್ನಿಸಿದ್ದಾರೆ.

'ಈ ಮಾಂಸವನ್ನು ಕುದ್ರೋಳಿಯಿಂದ ತರಲಾಗಿದೆ. ಇದಕ್ಕೆ ಬಿಲ್ ಕೂಡ ಇದೆ' ಎಂದು ಗೂಡ್ಸ್ ರಿಕ್ಷಾ ಚಾಲಕ ಸಮಜಾಯಿಷಿ ನೀಡಿದ್ದ. ಬಳಿಕ ಬಜರಂಗದಳ ಕಾರ್ಯಕರ್ತರು ಕದ್ರಿ ಠಾಣೆಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ಗೂಡ್ಸ್ ರಿಕ್ಷಾ ಹಾಗೂ ಅದರಲ್ಲಿದ್ಧ ಮಾಂಸವನ್ನು ವಶಕ್ಕೆ ಪಡೆದರು. ಅದರಲ್ಲಿ 100 ಕೆ.ಜಿ.ಗೂ ಹೆಚ್ಚು ಗೋಮಾಂಸವಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.