ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಧಾರಾಕಾರ ಮಳೆಯಿಂದ ತತ್ತರಿಸಿರುವ ಕೊಲ್ಲಮೊಗ್ರು, ಕಲ್ಮಕಾರು ಭಾಗದಲ್ಲಿ ಬುಧವಾರ ಸಂಜೆ ಮತ್ತೆ ಮಳೆ ಬಿರುಸಾಗಿದೆ.
ಕೊಲ್ಲಮೊಗ್ರು ಪೇಟೆಯ ರಸ್ತೆಗಳು ಮತ್ತೆ ಜಲಾವೃತ ಗೊಂಡಿವೆ. ಹರಿಹರ ಪಲ್ಲತ್ತಡ್ಕ- ಬಾಳುಗೋಡು ಸೇತುವೆ ಮುಳುಗಡೆಯಾಗಿದೆ. ಸುಳ್ಯ ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಬಳಿಕ ಮಳೆ ಬಿರುಸು ಪಡೆಯಿತು. ಬುಧವಾರ ಬೆಳಗಿನ ವೇಳೆ ಮಳೆ ಕೊಂಚ ತಗ್ಗಿತ್ತು.
ಮಳೆಯ ಹಿನ್ನೆಲೆಯಲ್ಲಿ ಸುಳ್ಯ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ಆ.4ರಂದು ರಜೆ ಘೋಷಿಸಲಾಗಿದೆ.