ಮಂಗಳೂರು: ಮಂಗಳೂರಿನಲ್ಲಿ ಸ್ಟಾರ್ಟ್ಅಪ್ಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸೃಷ್ಟಿಯಾಗಿರುವ ಪೂರಕ ವಾತಾವರಣವು ಜಿಲ್ಲೆಯ ಯುವ ಜನರಲ್ಲಿ ಭರವಸೆ ಮೂಡಿಸಿದೆ.

ಮಂಗಳೂರಿನಲ್ಲಿ ಐಟಿ ಉದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಸಿಲಿಕಾನ್ ಬೀಚ್, ಬೊಳ್ಪು, ಹೆರಿಟೇಜ್ ವಾಕ್ ಮೊದಲಾದ ಕಾರ್ಯಕ್ರಮಗಳು ನಡೆದಿವೆ. ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು (ಕೆಸಿಸಿಐ) ‘ಎಲಿವೇಟ್ ಬ್ರ್ಯಾಂಡ್ ಮಂಗಳೂರು’ ಕಾರ್ಯಕ್ರಮ ರೂಪಿಸಿ, ಐಟಿ ಸೇರಿದಂತೆ ಎಲ್ಲ ರೀತಿಯ ಸ್ಟಾರ್ಟ್ಅಪ್ಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭಿಸಿದೆ. ಜೊತೆಗೆ ಹಲವಾರು ಸಂಘ–ಸಂಸ್ಥೆಗಳು ಈ ಬಗ್ಗೆ ಕಾರ್ಯಪ್ರವೃತ್ತವಾಗಿರುವ ಫಲವಾಗಿ ಹೂಡಿಕೆದಾರರು ಕಡಲ ನಗರಿಯೆಡೆಗೆ ದೃಷ್ಟಿ ಬೀರಿದ್ದಾರೆ.

ಸರ್ಕಾರಿ ದಾಖಲೆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 280, ಉಡುಪಿ ಜಿಲ್ಲೆಯಲ್ಲಿ 132 ಸ್ಟಾರ್ಟ್ಅಪ್ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಸುಮಾರು 80 ಸ್ಟಾರ್ಟ್ಅಪ್ಗಳು ‘ಸ್ಟಾರ್ಟ್ಅಪ್ ಕರ್ನಾಟಕ ಪೋರ್ಟಲ್’ನಲ್ಲಿ ನೋಂದಾಯಿಸಿಕೊಂಡಿವೆ. 2023–24ನೇ ಸಾಲಿನಲ್ಲಿ 21, 2024–25ನೇ ಸಾಲಿನಲ್ಲಿ 20 ಸ್ಟಾರ್ಟ್ಅಪ್ಗಳು ನೋಂದಣಿ ಮಾಡಿಕೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕೈಗಾರಿಕೆಯಲ್ಲೂ ಆಸಕ್ತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ದೊಡ್ಡ ಕೈಗಾರಿಕೆಗಳು, 34 ಮಧ್ಯಮ ಕೈಗಾರಿಕೆಗಳು, ಸಣ್ಣ ಮತ್ತು ಕಿರು ಕೈಗಾರಿಕೆಗಳು 23,800ರಷ್ಟು ಇವೆ. 24–25ರಲ್ಲಿ 1,380 ಹೊಸ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಈಗಾಗಲೇ ಇರುವ ಕೈಗಾರಿಕಾ ಕ್ಷೇತ್ರದಲ್ಲಿ ನಿವೇಶನದ ಅಭಾವ ಇರುವ ಕಾರಣ ಬಳ್ಕುಂಜೆಯಲ್ಲಿ ಜಾಗ ಗುರುತಿಸಿ, ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್.

ಸೇವಾ ಕ್ಷೇತ್ರ, ಉತ್ಪಾದಕ ವಲಯದಲ್ಲಿ ಆಶಾದಾಯಕ ಬೆಳವಣಿಗೆ ಇದ್ದು, ಮುಂದಿನ 5–10 ವರ್ಷಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಗುವ ಭರವಸೆ ಇದೆ. ಆತಿಥ್ಯ ಕ್ಷೇತ್ರ, ವೈದ್ಯಕೀಯ ಪ್ರವಾಸೋದ್ಯಮ, ವಾಟರ್ ಸ್ಪೋರ್ಟ್ಸ್, ಆಹಾರ ಸಂಸ್ಕೃತಿ, ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲೂ ಜಿಲ್ಲೆ ಮುಂಚೂಣಿಯಲ್ಲಿದೆ. ಜನರಲ್ಲಿ ಅರಿವು ಮೂಡಿಸಿದರೆ, ಖಚಿತವಾಗಿ ಬದಲಾವಣೆ ತರಲು ಸಾಧ್ಯವಿದೆ ಎನ್ನುತ್ತಾರೆ ಎಲಿವೇಟ್ ಬ್ರ್ಯಾಂಡ್ ಮಂಗಳೂರು ನಿರ್ದೇಶಕಿ ಆತ್ಮಿಕಾ ಅಮೀನ್.

ಉದ್ಯಮಿಗಳು ಸೃಜನಶೀಲ ಕ್ಷೇತ್ರಗಳಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಐಟಿ ಮಾತ್ರವಲ್ಲ, ಎಲ್ಲ ಕ್ಷೇತ್ರಗಳ ಸ್ಟಾರ್ಟ್ಅಪ್ಗಳಲ್ಲಿ, ಎಂಎಸ್ಎಂಇಗಳಲ್ಲಿ ಹೂಡಿಕೆ ಮಾಡಲು ಸ್ಥಳೀಯರೇ ಉತ್ಸುಕರಾಗಿದ್ದಾರೆ. ಹೊರರಾಜ್ಯ, ವಿದೇಶಗಳಲ್ಲಿ ಉದ್ಯಮ ನಡೆಸುವ ಅನೇಕರು ಕರೆ ಮಾಡಿ, ಮೂಲ ಸೌಕರ್ಯಗಳ ಬಗ್ಗೆ ವಿಚಾರಿಸುತ್ತಿರುವುದು ಹೊಸ ಬೆಳವಣಿಗೆಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಕೆಸಿಸಿಐ ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಜಿಲ್ಲೆಯಲ್ಲಿ ನಡೆಯುವ ಗಾಳಿಪಟ ಉತ್ಸವ, ಸ್ಟ್ಯಾಂಡ್ಅಪ್ ಪ್ಯಾಡಲಿಂಗ್ನಂತಹ ಕ್ರೀಡೆಗಳೂ ಎಲಿವೇಟ್ ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮಕ್ಕೆ ಪೂರಕವಾಗಿವೆ. ಐಟಿ ಉದ್ಯಮಿಗಳು ಇನ್ನು 10 ವರ್ಷಗಳಲ್ಲಿ 2 ಲಕ್ಷ ಐಟಿ ಉದ್ಯೋಗ ಸೃಷ್ಟಿಸುವ ಯೋಜನೆ ಹೊಂದಿದ್ದಾರೆ ಎಂದು ಅವರು ವಿವರಿಸಿದರು.

ರೋಬೊಸಾಫ್ಟ್ ಕಂಪನಿ ಸ್ಥಾಪಕ ರೋಹಿತ್ ಭಟ್ ಅವರು ಇತ್ತೀಚೆಗೆ ಸುಮಾರು 200 ಮಂದಿ ಸಂಪರ್ಕಿಸಿ ನಡೆಸಿದ ಸಮೀಕ್ಷೆಯಲ್ಲಿ ಶೇ 95ರಷ್ಟು ಮಂದಿ ಊರಿಗೆ ಮರಳಲು ಆಸಕ್ತಿ ತೋರಿದ್ದಾರೆ. ಹೆಚ್ಚಿನವರು ಐಟಿ ಕ್ಷೇತ್ರದವರು.

ಒಂದೂವರೆ ತಿಂಗಳಿನಲ್ಲಿ ಟೆಂಡರ್

ಮಂಗಳೂರಿನಲ್ಲಿ ಐಟಿ ಉದ್ಯಮಕ್ಕೆ ಪೂರಕವಾಗಿ ಐಟಿ ಪಾರ್ಕ್ ನಿರ್ಮಿಸಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿದೆ. ನಗರದ ಹೊರವಲಯದ ಬ್ಲೂಬೆರಿ ಹಿಲ್ಸ್ನಲ್ಲಿ ಕಿಯೋನಿಕ್ಸ್ ಮತ್ತು ಐಟಿ ಪಾರ್ಕ್ ನಿರ್ಮಾಣಕ್ಕೆ ಸುಮಾರು 3.25 ಎಕರೆ ಜಾಗ ಗುರುತಿಸಲಾಗಿದೆ. ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆ ಬಗ್ಗೆ ಸರ್ಕಾರ ಆಸಕ್ತಿ ಹೊಂದಿದ್ದು ಇನ್ನು ಒಂದೂವರೆ ತಿಂಗಳಿನಲ್ಲಿ ಟೆಂಡರ್ ಕರೆಯಲಾಗುವುದು ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಪ್ರತಿಕ್ರಿಯಿಸಿದರು.

‘ಮೂಲ ಸೌಕರ್ಯ ಇದ್ದರೆ ಊರಿಗೆ ಮರಳಲು ಸಿದ್ಧ’

ತಂತ್ರಜ್ಞಾನ ಹಾಗೂ ಐಟಿ ಸಂಬಂಧಿಸಿ ಅಗತ್ಯ ಮೂಲ ಸೌಕರ್ಯಗಳು ಇದ್ದರೆ ಮಂಗಳೂರಿಗೆ ಬಂದು ಕೆಲಸ ಮಾಡಲು ಖಂಡಿತವಾಗಿ ಆಸಕ್ತಿ ಇದೆ. ಕುಟುಂಬದ ಸದಸ್ಯರೊಂದಿಗೆ ಜೀವನ ನಡೆಸಲೂ ಸಾಧ್ಯವಾಗುತ್ತದೆ ಎನ್ನುತ್ತಾರೆ ಅಮೆರಿಕ ಜಾರ್ಜಿಯಾದ ಕ್ಲೌಡ್ ಆ್ಯಂಡ್ ಸಾಫ್ಟ್ವೇರ್ ಡೆವಲಪ್ಮೆಂಟ್ನ ಉಪಾಧ್ಯಕ್ಷ ಸಂತೋಷ್ ಶೆಟ್ಟಿ. ‘ಗುಣಮಟ್ಟದ ಇಂಟರ್ನೆಟ್ ಕಚೇರಿ ಸೌಲಭ್ಯ ಸುಲಭ ಸಂಪರ್ಕ ಸಾಧನಗಳು ವೃತ್ತಿ ಬೆಳವಣಿಗೆಗೆ ಅವಕಾಶಗಳು ಇದ್ದರೆ ಮರಳಿ ಊರಿಗೆ ಬಂದು ನೆಲೆಯಾಗಲು ಸಿದ್ಧನಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.