ಸೋಮವಾರ, ಸೆಪ್ಟೆಂಬರ್ 20, 2021
23 °C

ಜೆಇಇ ಮೇನ್ಸ್‌ : ಎಕ್ಸ್‌ಪರ್ಟ್‌ ವಿದ್ಯಾರ್ಥಿಗಳ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜೆಇಇ ಮೇನ್ಸ್ ಮೂರನೇ ಹಂತದ ಪರೀಕ್ಷೆಯ ಭೌತವಿಜ್ಞಾನದಲ್ಲಿ ನಗರದ ಎಕ್ಸ್‌ಪರ್ಟ್‌ ಪದವಿಪೂರ್ವ ಕಾಲೇಜಿನ ಮಿನಾಂಕ್ ಕೆ.ಪಿ. 100 ಪರ್ಸೆಂಟೈಲ್ ಅಂಕ ಪಡೆದಿದ್ದಾರೆ.

ಕಾಲೇಜಿನ ಐವರು ವಿದ್ಯಾರ್ಥಿಗಳು 99 ಪರ್ಸೆಂಟೈಲ್‍ಗಿಂತ ಅಧಿಕ ಪಡೆದಿದ್ದಾರೆ. 12 ವಿದ್ಯಾರ್ಥಿಗಳು 98 ಪರ್ಸೆಂಟೈಲ್‍ಗಿಂತ ಅಧಿಕ, 18 ವಿದ್ಯಾರ್ಥಿಗಳು 97 ಪರ್ಸೆಂಟೈಲ್‍ಗಿಂತ ಅಧಿಕ, 45 ವಿದ್ಯಾರ್ಥಿಗಳು 95 ಪರ್ಸೆಂಟೈಲ್‍ಗಿಂತ ಅಧಿಕ, 106 ವಿದ್ಯಾರ್ಥಿಗಳು 90 ಪರ್ಸೆಂಟೈಲ್‍ಗಿಂತ ಅಧಿಕ ಫಲಿತಾಂಶ ಪಡೆದಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ರಾಜ್ ಅನಿಕೇತ್ ರೆಡ್ಡಿ ವಿ.ಎಸ್. 99.9493158, ಮಿನಾಂಕ್ ಕೆ.ಪಿ. 99.5674496, ಸೌರಭ್ ಮಯ್ಯ 99.4400428, ಅಮೋಘ ಎ. ಹಲಹಳ್ಳಿ 99.1651491, ಸಂಜನಾ ಕಾಮತ್ ಪಂಚಮಲ್ 99.0954538 ಅಂಕ ಪಡೆದಿದ್ದಾರೆ. ತೇಜಸ್ 98.9148375, ಈಶಾ ಹನುಮರೆಡ್ಡಿ ಕೋಟಿ 98.6869069, ಚಿನ್ಮಯ್ ಎನ್. 98.6869069, ಸುಹಾನ್ ಸಮರ್ಥ ಬಿ.ಎಸ್. 98.5996181, ಧನ್ವಿನ್ ಎಲ್. 98.2989439, ಎಂ.ಶ್ರೇಯಸ್ ಶೆಣೈ 98.2597072, ಸಂಜಯ್ ಡಿ. ಕುಲಾಲ್ 98.0651129, ವರುಣ್ ದಿನೇಶ್ ಶೆಟ್ಟಿ 97.9413543, ಎಚ್.ಎನ್. ಜಾಗೃತಿ 97.4047071, ಎಂ.ಪಿ.ಆಕಾಶ್ 97.3316359, ಕಿರಣ್ ಎಂ.ಪಿ. 97.3044608, ಆರ್.ಸೃಷ್ಟಿ 97.1941726, ಎ.ಸಹಜ್ ಆಳ್ವ 97.017071 ಅಂಕವನ್ನು ಪಡೆದಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳ ಶ್ರಮದ ಸಾಧನೆಯನ್ನು ಕಾಲೇಜಿನ ಹಾಗೂ ಆಡಳಿತ ಮಂಡಳಿಯ ಪರವಾಗಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್‍ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.