ಬುಧವಾರ, ಜೂನ್ 29, 2022
23 °C
ಎಂಆರ್‌ಪಿಎಲ್‌ ,ಬೃಹತ್‌ ಕಂಪನಿಗಳಲ್ಲಿ ತುಳುನಾಡಿನ ಯುವಕರಿಗೆ ಉದ್ಯೋಗ

ಮನೆಮನೆ ಪ್ರತಿಭಟನೆ: ಯುವಜೆಡಿಎಸ್‌ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಇಲ್ಲಿನ ಎಂಆರ್‌ಪಿಎಲ್‌ ಸೇರಿದಂತೆ ಕೆಲವು ಬೃಹತ್‌ ಕಂಪನಿಗಳಲ್ಲಿ ಸ್ಥಳೀಯ ತುಳುನಾಡಿನ ಯುವಕರಿಗೆ ಉದ್ಯೋಗ ದೊರೆಯಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಆಯೋಜಿಸಿದ್ದ ಮನೆ ಮನೆ ಪ್ರತಿಭಟನೆಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ಮನೆ ಮನೆ ಪ್ರತಿಭಟನಾ ಫಲಕವನ್ನು ಹಿಡಿದು ಶನಿವಾರ ಪ್ರತಿಭಟನೆ ನಡೆಸಲಾಯಿತು.‌

 ಅವರು ಮಾತನಾಡಿ, ‘ಎಂಆರ್‌ಪಿಎಲ್‌ ಸೇರಿದಂತೆ ಬೃಹತ್‌ ಉದ್ದಿಮೆಗಳಲ್ಲಿ ಸ್ಥಳೀಯ ಯುವಜನರಿಗೆ ಪ್ರತಿಬಾರಿ ಅನ್ಯಾಯವಾಗುತ್ತಿದೆ. ಉತ್ತಮ ಶಿಕ್ಷಣವನ್ನು ಹೊಂದಿದ ಇಲ್ಲಿನ ಯುವಕರಿಗೆ ಕೆಲಸದಲ್ಲಿ ಅವಕಾಶ ನೀಡದೆ ಬೇರೆ ರಾಜ್ಯದವರಿಗೆ ಮನ್ನಣೆ ನೀಡಲಾಗುತ್ತಿದೆ ಇದು ಖಂಡನೀಯ. ಜಿಲ್ಲೆಯ ಸಂಸದರು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸ್ಥಳೀಯ ಯುವಕರಿಗೆ ಉದ್ಯೋಗದಲ್ಲಿ ಸೂಕ್ತ ಮನ್ನಣೆ ದೊರೆಯುವಂತಾಗಬೇಕು. ಇಲ್ಲವಾದಲ್ಲಿ ಯುವ ಜೆಡಿಎಸ್ ಬೃಹತ್ ಪ್ರಮಾಣದ ಹೋರಾಟವನ್ನು ನಡೆಸಲಿದೆ. ಎಲ್ಲರೂ ಕೂಡ ಸಹಕಾರ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಯುವ ಜನತಾದಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೈಝಲ್ ಮೋಹಮ್ಮದ್, ಯುವ ಜನತಾದಳದ ಮಂಗಳೂರು ಉತ್ತರ ಘಟಕಾಧ್ಯಕ್ಷ ರತೀಶ್ ಕರ್ಕೇರ , ಪ್ರದೀಪ್, ರೊಹಿತ್, ಶ್ರೀನಾಥ್ ಪೂಜಾರಿ  ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು